More

    ಉತ್ತಮ ಮಳೆ-ಬೆಳೆಗಾಗಿ ದೇವರಿಗೆ ಉಡಿತುಂಬಿದ ರೈತರು

    ಹನುಮಸಾಗರ: ಇಲ್ಲಿನ ಗ್ರಾಮ ದೇವತೆ ದ್ಯಾಮಾಂಭಿಕಾ ದೇವಿ ದೇವಸ್ಥಾನದಲ್ಲಿ ಮಂಗಳವಾರ ಉತ್ತಮ ಮಳೆ ಬೆಳೆಗಾಗಿ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.

    ಪ್ರತಿ ವರ್ಷ ಮುಂಗಾರು ಪೂರ್ವದಲ್ಲಿ ಭೂಮಿಗೆ ಬೀಜ ಬಿತ್ತುವ ಮೊದಲು ಗ್ರಾಮ ದೇವತೆಗೆ ಉಡಿ ತುಂಬುವುದು ದಶಕಗಳಿಂದ ನಡೆಸಿಕೊಂಡು ಬಂದ ಸಂಪ್ರದಾಯ. ಐದು ವಾರಗಳ ಗ್ರಾಮದ 5 ದೇವತೆಗಳಿಗೆ ಉಡಿ ತುಂಬುತ್ತಾರೆ.

    ಈ ರೀತಿ ಉಡಿ ತುಂಬುವುದರಿಂದ ಮಳೆ ಉತ್ತಮವಾಗಿ ಆಗುತ್ತದೆ. ಬೆಳೆಗೆ ಯಾವುದೇ ರೀತಿಯ ಹಾನಿ ಆಗದೆ ಫಸಲು ಸಮೃದ್ಧವಾಗಿ ಬರುತ್ತದೆ ಎಂಬುವುದು ರೈತರ ನಂಬಿಕೆಯಾಗಿದೆ. ವಾರ ಹಿಡಿದಿದ್ದರಿಂದ ಗ್ರಾಮದಲ್ಲಿ ಐದು ಮಂಗಳವಾರ ಕುಟ್ಟುವುದು, ಬಿಸುವುದನ್ನು ನಿಷೇಧಿಸಲಾಗುವುದು.

    ಇದನ್ನೂ ಓದಿ: ಮುಂದಿನ 3 ದಿನ ರಾಜ್ಯದಲ್ಲಿ ಮಳೆರಾಯನ ಅಬ್ಬರ: ಬೆಂಗಳೂರಲ್ಲಿ ದಿನವಿಡಿ ಸಾಧಾರಣ ಮಳೆ ಸಾಧ್ಯತೆ

    ಮುತ್ತೈದೆಯರು ಗ್ರಾಮದ ಮಾಲಿಪಾಟೀಲ್ ಮನೆತನದಿಂದ ಉಡಿ ಸಾಮಾಗ್ರಿಗಳನ್ನು ತೆಗೆದುಕೊಂಡು ಬಂದು ಐದು ದೇವಸ್ಥಾನಗಳಲ್ಲಿ ಪ್ರತಿ ಮಂಗಳವಾರ ಪಂಚ ಕಳಸದೊಂದಿಗೆ ಡೊಳ್ಳು ಬಾರಿಸುವ ಮೂಲಕ ಉಡಿ ತುಂಬುತ್ತಾರೆ.

    ಪ್ರಮುಖರಾದ ಸೂಚಪ್ಪ ದೇವರಮನಿ, ಭರಮಪ್ಪ ಬಿಂಗಿ, ಸಕ್ರಪ್ಪ ಬಿಂಗಿ, ಪರಸಪ್ಪ ಬಿಂಗಿ, ಮರೇಗೌಡ ಬೋದುರ, ದ್ಯಾಮಣ್ಣ ಬಿಂಗಿ, ನಾಗರಾಜ ಸೇಬಿನಕಟ್ಟಿ, ಮೌನೇಶ ಕಮ್ಮಾರ, ಶಿವಕುಮಾರ ಸಂಗಮದ, ಭೀಮಣ್ಣ ಕಮ್ಮಾರ ಇತರರಿದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts