

ಪೆರ್ಲ: ಎಣ್ಮಕಜೆ ಗ್ರಾಪಂ 11ನೇ ವಾರ್ಡ್ನ ಪಾಟ್ಲದಳ ಪರಿಶಿಷ್ಟ ವರ್ಗದ ಸಮುದಾಯ ಕೇಂದ್ರವನ್ನು ಪಂಚಾಯಿತಿ ಯೋಜನೆಯಂತೆ ನವೀಕರಿಸಿ ಇತ್ತೀಚೆಗೆ ಹಸ್ತಾಂತರಿಸಲಾಯಿತು.
ಕೀಲಿಕೈ ಹಸ್ತಾಂತರ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ವಾರ್ಡ್ ಸದಸ್ಯ ರಾಧಾಕೃಷ್ಣ ನಾಯಕ್ ಶೇಣಿ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಗುರಿಕಾರ ಶಿವನಾಯ್ಕ, ಎಸ್.ಟಿ. ಪ್ರಮೋಟರ್ ಸಂಧ್ಯಾ ಕೆ, ಗುತ್ತಿಗೆದಾರ ಆಶ್ರಫ್ ಬೆದ್ರಂಪಳ್ಳ ಮೊದಲಾದವರು ಉಪಸ್ಥಿತರಿದ್ದರು. ಸಮುದಾಯ ಕೇಂದ್ರ ನಿರ್ವಹಣೆಗಾಗಿ ಸಾಮುದಾಯಿಕ ಸಮಿತಿಯೊಂದನ್ನು ರಚಿಸಿ ಜವಾಬ್ದಾರಿ ನೀಡಲಾಯಿತು. ರಾಜೇಶ್ ನಾಯ್ಕ(ಅಧ್ಯಕ್ಷರು), ಭಾರತಿ(ಕಾರ್ಯದರ್ಶಿ) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂಧ್ಯಾ ಕೆ, ತುಳಸಿ, ವಸಂತ ಕೆ.ಕೆ.ಕಾಡು, ಗೋವಿಂದ ನಾಯ್ಕ, ಚಿತ್ರಕಲಾ ಬಲ್ತಕಲ್ಲು ಆಯ್ಕೆಯಾದರು.