ರೋಟರಿಯಿಂದ ಆಶ್ರಮಕ್ಕೆ ಸಾಮಗ್ರಿ ಹಸ್ತಾಂತರ

Btw_Ashram
Published on

ಬಂಟ್ವಾಳ: ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಸದಸ್ಯರು ಒಟ್ಟು ಸೇರಿ ಬೆಳ್ತಂಗಡಿ ಗಂಡಿಬಾಗಿಲು ಸಿಯೋನ್ ಆಶ್ರಮಕ್ಕೆ ತೆರಳಿ ಅಕ್ಕಿ ಸಹಿತ 1 ಲಕ್ಷ ರೂ. ಮೌಲ್ಯದ 1 ಟನ್ ಆಹಾರ ಸಾಮಾಗ್ರಿ ಹಸ್ತಾಂತರಿಸಿದರು.

ಸಿಯೋನ್ ಆಶ್ರಮದ ಆಡಳಿತ ನಿರ್ದೇಶಕ ಯು.ಸಿ.ಪೌಲ್ ಮಾತನಾಡಿ, ಸುಮಾರು 387 ಮಂದಿ ಮಾನಸಿಕ ಮತ್ತು ಅಂಗವಿಕಲರು ಸಹಿತ ನಿರಾಶ್ರಿತರಿಗೆ ಸಿಯೋನ್ ಆಶ್ರಮ ಉಚಿತ ಸೇವೆ ನೀಡುತ್ತಿದೆ. ರೋಟರಿ ಕ್ಲಬ್ ಸಾಮಗ್ರಿ ಒದಗಿಸಿ ಇತರರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಲಬ್‌ನ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಮಾಜಿ ಅಧ್ಯಕ್ಷೆ ಶೃತಿ ಮಾಡ್ತಾ, ಕಾರ್ಯದರ್ಶಿ ರಾಜೇಶ ಶೆಟ್ಟಿ ಸೀತಾಳ, ಪ್ರಮುಖರಾದ ಹರೀಶ ಶೆಟ್ಟಿ ಬಂಟ್ವಾಳ, ವಿಜಯ ಫರ್ನಾಂಡಿಸ್, ಸೆಬೆಸ್ಟಿನ್ ಮಿನೇಜಸ್, ಪ್ರವೀಣ್ ಫರ್ನಾಂಡಿಸ್ ಉಜಿರೆ, ರೂಪಾ ಆರ್.ಶೆಟ್ಟಿ, ಪ್ರೀತಾ ಸಿಕ್ವೇರ, ಪವನಿ ಹರೀಶ ಶೆಟ್ಟಿ ಮತ್ತಿತರರು ಇದ್ದರು. ಇದೇ ವೇಳೆ ಯು.ಸಿ.ಪೌಲ್ ದಂಪತಿಯನ್ನು ಸನ್ಮಾನಿಸಲಾಯಿತು. ಸಿಯೋನ್ ಆಶ್ರಮದ ಆಡಳಿತ ನಿರ್ದೇಶಕ ಯು.ಸಿ.ಪೌಲ್ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net