ಅಭಿವೃದ್ಧಿಗೆ ಅನುದಾನ ಹಸ್ತಾಂತರ

pad
ಅದಾನಿ ಫೌಂಡೇಶನ್ ಸಿಎಸ್‌ಆರ್ ಅನುದಾನದಲ್ಲಿ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಸ್ಯಾನಿಟರಿಪ್ಯಾಡ್ ಸುಡುವಯಂತ್ರವನ್ನು ಕಿಶೋರ್ ಆಳ್ವ ಹಾಗೂ ಶಶಿಕಲಾ ವೈ. ಲೋಕಾರ್ಪಣೆ ಮಾಡಿದರು
Published on

ಪಡುಬಿದ್ರಿ: ಅದಾನಿ ಫೌಂಡೇಶನ್ ಘೋಷಿಸಿದ 3 ಕೋಟಿ ರೂ. ಸಿಎಸ್‌ಆರ್ ಅನುದಾನದಲ್ಲಿ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯಲ್ಲಿ 1.90 ಕೋಟಿ ರೂ. ಮೊತ್ತದ ಮೂಲಸೌಕರ್ಯ ಅಭಿವೃದ್ಧಿ ಕೆಲಸ ಪೂರ್ಣಗೊಳಿಸಿ ಗ್ರಾಪಂಗೆ ಹಸ್ತಾಂತರಿಸಲಾಗಿದೆ ಎಂದು ಅದಾನಿ ಸಮೂಹ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು.

ಪಡುಬಿದ್ರಿ ಗ್ರಾಪಂ ವ್ಯಾಪ್ತಿಯಲ್ಲಿ ಅದಾನಿ ಫೌಂಡೇಶನ್ ಸಿಎಸ್‌ಆರ್ ಅನುದಾನ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರ ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ವೈ, ಉಪಾಧ್ಯಕ್ಷ ಹೇಮಚಂದ್ರ, ಸದಸ್ಯರಾದ ನವೀನ್ ಶೆಟ್ಟಿ, ರವಿ ಶೆಟ್ಟಿ ಗುಂಡ್ಲಾಡಿ, ಹರೀಶ್ ಶೆಟ್ಟಿ, ಗಣೇಶ್ ಕೋಟ್ಯಾನ್, ಶೋಭಾ ಶೆಟ್ಟಿ, ಶಶಿಕಲಾ, ಅಶೋಕ್ ಪೂಜಾರಿ, ರಮೀಜ್ ಹುಸೈನ್, ನಿಯಾಜ್, ಸುನಂದಾ, ವಿದ್ಯಾಶ್ರೀ, ಜ್ಯೋತಿ ಮೆನನ್, ಸಂದೇಶ್ ಶೆಟ್ಟಿ, ಶಾಫಿ, ಅದಾನಿ ಪವರ್ ಲಿಮಿಟೆಡ್ ಎಜಿಎಂ ರವಿ ಆರ್.ಜೇರೆ, ಅದಾನಿ ಫೌಂಡೇಷನ್ ಅನುದೀಪ್ ಉಪಸ್ಥಿತರಿದ್ದರು.

ಉಡುಪಿ ವಿದ್ಯುತ್ ಸ್ಥಾವರ ಅದಾನಿ ಸಮೂಹ ತೆಕ್ಕೆಗೆ ಬಂದ ನಂತರ ಸ್ಥಾವರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸತತವಾಗಿ 9 ವರ್ಷಗಳಿಂದ ಹತ್ತು ಹಲವಾರು ಅಭಿವೃದ್ಧಿ ಯೋಜನೆ ಅದಾನಿ ಫೌಂಡೇಷನ್ ಮುಖೇನ ಹಮ್ಮಿಕೊಂಡು ಬರುತ್ತಿದ್ದು, ಅದರ ಸವಲತ್ತುಗಳನ್ನು ಗ್ರಾಮಸ್ಥರಿಗೆ ತಲುಪಿಸುತ್ತಿದೆ. ಸಿಟಿ ಗ್ಯಾಸ್ ವಿತರಣೆ ಯೋಜನೆಯಡಿ ಮನೆಗಳಿಗೆೆ ಗ್ಯಾಸ್ ವಿತರಣೆಗೆ ಅದಾನಿ ಸಮೂಹ ಪಡುಬಿದ್ರಿ ಗ್ರಾಪಂನ್ನು ಮೊದಲ ಆದ್ಯತೆಯಾಗಿ ಆಯ್ಕೆ ಮಾಡಿದೆ.-ಕಿಶೋರ್ ಆಳ್ವ ಅದಾನಿ ಸಮೂಹ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net