ಶಾಲೆಗೆ ನಲಿ-ಕಲಿ ಪೀಠೋಪಕರಣ ಹಸ್ತಾಂತರ

hbr (4)
Published on

ಹೆಬ್ರಿ: ಪಾಡಿಗಾರ ಬಣ್ಣಂಪಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಲಿಕಲಿ ಪೀಠೋಪಕರಣ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಹಂದಿಬೆಟ್ಟು ಮನೋಜ್ ಶೆಟ್ಟಿ ಕೊಡುಗೆಯಾಗಿ ನೀಡಿದ 50 ಸಾವಿರ ರೂ. ಮೌಲ್ಯದ ಪೀಠೋಪಕರಣಗಳನ್ನು ಪೆರ್ಡೂರು ಬಂಟರ ಸಂ ಅಧ್ಯಕ್ಷ ಶಾಂತರಾಮ ಸೂಡ ಶಾಲೆಗೆ ಹಸ್ತಾಂತರಿಸಿದರು.

ಪೆರ್ಡೂರು ಬಂಟರ ಸಂ ಸದಸ್ಯ ಸಾಂಗ್ಲಿ ದಿವಾಕರ ಶೆಟ್ಟಿ, ಶ್ರೀಪಾದ ರೈ ಪಳಜೆ, ರಮೇಶ್ ಹೆಗ್ಡೆ ಅಂಕಲಬೆಟ್ಟು, ವಿಜಯ ಶೆಟ್ಟಿ ಕಲ್ಲಾಳ, ವಸಂತಕುವಾರ್ ಶೆಟ್ಟಿ, ಪ್ರಶಾಂತ ಶೆಟ್ಟಿ, ನಿತೇಶ್ ಶೆಟ್ಟಿ, ಪೆರ್ಡೂರು ಗ್ರಾಮ ಪಂಚಾಯಿತಿ ಸದಸ್ಯರಾದ ಉದಯ್ ಕುಲಾಲ್, ರಾವೇಂದ್ರ ನಾಯಕ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರ ಪುತ್ರನ್, ಶಿಕ್ಷಕರು, ಪಾಲಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net