ಮದ್ಯವರ್ಜನ ಶಿಬಿರಕ್ಕೆ ನೆರವು ಹಸ್ತಾಂತರ

aid
ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ವತಿಯಿಂದ ಆರ್ಡಿ 1869ನೇ ಮದ್ಯವರ್ಜನ ಶಿಬಿರಕ್ಕೆ ರೂ 50.000 ನಗದು ಧನ ಸಹಾಯವನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ ಹಸ್ತಾಂತರಿಸಿದರು.
Published on

ಆರ್ಡಿ: ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ವತಿಯಿಂದ ಆರ್ಡಿ ಚಿತ್ತೇರಿ ಶ್ರೀದುರ್ಗಾಪರಮೇಶ್ವರಿ ಸಿದ್ದಿವಿನಾಯಕ ದೇವಸ್ಥಾನದ ಸಮೀಪದ ಕಮಲ ವಿಠ್ಠಲ ಸಭಾಭವನದಲ್ಲಿ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಆರ್ಡಿ, ಬೆಳ್ವೆ ವಲಯ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ 1869ನೇ ಮದ್ಯವರ್ಜನ ಶಿಬಿರಕ್ಕೆ ರೂ 50.000 ನಗದು ಧನ ಸಹಾಯವನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ ಹಸ್ತಾಂತರಿಸಿದರು.

ಲಯನ್ಸ್ ಕ್ಲಬ್ ವಲಯ ಕಾರ್ಯದರ್ಶಿ ವೈ ಪಟ್ಟಾಭಿರಾಮ್ ಭಟ್ ಮರೂರು, ಕೋಶಾಧಿಕಾರಿ ಜಯಪ್ರಕಾಶ್ ಶೆಟ್ಟಿ ಯಳಂತೂರು, ಕಾರ್ಯದರ್ಶಿ ಅಣ್ಣಯ್ಯ ಶೆಟ್ಟಿ, ಸದಸ್ಯ ಶಿವರಾಮ ಮೊಗವೀರ ಮರೂರು, ಸದಸ್ಯೆ ಉಷಾ ಶೆಟ್ಟಿ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಆರ್ಡಿ ಅಧ್ಯಕ್ಷ ಸುರೇಶ ಶೆಟ್ಟಿ ಆರ್ಡಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ, ಬೆಳ್ವೆ ವಲಯ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟಗಳ ಅಧ್ಯಕ್ಷ ಕೃಷ್ಣ ಪುತ್ರನ್ ಆರ್ಡಿ, ಬೆಳ್ವೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಎಚ್.ವಸಂತಕುಮಾರ್ ಶೆಟ್ಟಿ ಬೆಳ್ವೆ, ಸದಸ್ಯ ಸುಧಾಕರ ಶೆಟ್ಟಿ ಅರಸಮ್ಮಕಾನು, ಸುದರ್ಶನ ಶೆಟ್ಟಿ ಆರ್ಡಿ, ಹೆಬ್ರಿ ತಾಲೂಕು ಶ್ರೀಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷ ಗೋಪಾಲ ಕುಲಾಲ್, ಬೆಳ್ವೆ ವಲಯ ಮೇಲ್ವಿಚಾರಕ ರಾಘವೇಂದ್ರ ಗೌಡ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net