ಹಂಪಿಯಲ್ಲಿ ಪ್ರವಾಸಿಗನ ಕ್ಯಾಮರಾ ಕಳವು, ಆರೋಪಿ ಅರೆಸ್ಟ್

CRIME
ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ಇತ್ತೀಚೆಗೆ ಕಳುವು ಮಾಡಲಾಗಿದ್ದ 12.63 ಲಕ್ಷ ರೂ. ಮೌಲ್ಯದ ಫೋಟೋ ಶೂಟ್ ಕ್ಯಾಮರಾ ಇತರ ಪರಿಕರಗಳನ್ನು ವಶಕ್ಕೆ ಪಡೆದ ಪೊಲೀಸರೊಂದಿಗೆ ಎಸ್ಪಿ ಶ್ರೀಹರಿ ಬಾಬು, ಹಂಪಿ ವೃತ್ತದ ಸಿಪಿಐ ಶಿವರಾಜ್ ಎಸ್.ಇಂಗಳೆ, ಹಂಪಿ ಪ್ರವಾಸಿ ಠಾಣೆ ಪಿಎಸ್‌ಐ ಶಿವಕುಮಾರ ನಾಯ್ಕ, ಚಿತ್ತವಾಡ್ಗಿ ಠಾಣೆ ಮುಖ್ಯಪೇದೆ ಜಾವೇದ್ ಅಶ್ರಫ್, ಹಂಪಿ ಪ್ರವಾಸಿ ಠಾಣೆ ಮುಖ್ಯಪೇದೆ ಕರಿಬಸಜ್ಜ, ಪೇದೆಗಳಾದ ಶರಣಪ್ಪ, ಮೈಲಾರಪ್ಪ, ಮಾರುತಿ, ನಾಗರಾಜ, ಸಿಡಿಆರ್ ವಿಭಾಗದ ಕುಮಾರ್ ನಾಯ್ಕ ಇದ್ದರು.
Published on

ಹೊಸಪೇಟೆ: ತಾಲೂಕಿನ ಹಂಪಿಯ ವಸತಿ ಗೃಹವೊಂದರಲ್ಲಿ ತಂಗಿದ್ದ ಪ್ರವಾಸಿಗನ 12.63 ಲಕ್ಷ ರೂ. ಮೌಲ್ಯದ ಫೋಟೋ ಶೂಟ್ ಕ್ಯಾಮರಾ ಮತ್ತು ಇತರ ಪರಿಕರಗಳನ್ನು ಕಳುವು ಮಾಡಿದ್ದ ಆಂಧ್ರಪ್ರದೇಶ ಮೂಲದ ಆರೋಪಿಯನ್ನು ಬಂಧಿಸುವಲ್ಲಿ ಹಂಪಿ ಪ್ರವಾಸಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಶ್ಚಿಮ ಗೋದಾವರಿ ಜಿಲ್ಲೆ, ವೇಲ್ಪುರಿ ಗ್ರಾಮದ ಕಾರ್ತಿಕ್ ಚೌಧರಿ ಅಕ್ಕಿನೇನಿ ಬಂಧಿತ ಆರೋಪಿ. ಆತನಿಂದ 8.50 ಲಕ್ಷ ರೂ. ಮೌಲ್ಯದ ಕ್ಯಾಮೆರಾ, ಲೆನ್ಸ್‌ಗಳು ಹಾಗೂ ಫೋಟೋ ಶೂಟ್‌ಗೆ ಬೇಕಾಗುವ ಪರಿಕರಗಳು ಸೇರಿ ಒಟ್ಟು 12.63 ಲಕ್ಷ ರೂ. ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕಳೆದ ಆ.23 ರಂದು ಹಂಪಿಗೆ ಭೇಟಿ ನೀಡಿದ್ದ ಬೆಂಗಳೂರು ಮೂಲದ ಪ್ರವಾಸಿಗ ಪ್ರವೀಣ್‌ಕುಮಾರ್ ಎಂಬುವವರ ಫೋಟೋ ಶೂಟ್ ವಸ್ತುಗಳನ್ನು ಕಳುವು ಮಾಡಲಾಗಿತ್ತು ಎಂದು ಎಸ್ಪಿ ಬಿ.ಎಲ್. ಶ್ರೀಹರಿಬಾಬು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net