ಅಲ್ಲೊಳ್ಳಿ ಸರ್ಕಾರಿ ಶಾಲೆ ಗೋಡೆ ಕುಸಿತ

26-hly school
Published on

ಹಳಿಯಾಳ: ತಾಲೂಕಿನಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಬುಧವಾರ ಅಲ್ಲಲ್ಲಿ ಮನೆಗಳ ಹಾಗೂ ಶಾಲೆಗಳ ಗೊಡೆ ಬಿದ್ದು ಹಾನಿ ಸಂಭವಿಸಿದೆ.
ಬುಧವಾರ ಬೆಳಗ್ಗೆ ತಹಸೀಲ್ದಾರ್ ಕಚೇರಿ ಮೂಲಗಳ ಪ್ರಕಾರ ತಾಲೂಕಿನ ಅಲ್ಲೊಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಒಂದು ಬದಿಯ ಗೋಡೆ ಸಂಪೂರ್ಣ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ರಜೆ ನೀಡಿದ್ದರಿಂದ ಯಾವುದೇ ತೊಂದರೆಯಾಗಿಲ್ಲ.ಗೋಲೆಹಳ್ಳಿ ಗ್ರಾಮದ ಜೈಬುನಬಿ ಉಮ್ಮರಲ್ಲಿ ನಾಯ್ಕ ಹಾಗೂ ತೇರಗಾಂವ ಗ್ರಾಮದಲ್ಲಿ ಬಾಳು ಅಡಕೆಹೊಸೂರ ಅವರ ಮನೆ ಗೋಡೆ ಕುಸಿದು ಬಿದ್ದಿದೆ. ಹಾನಿಯಾದ ಸ್ಥಳಗಳಿಗೆ ಆಯಾ ಗ್ರಾಮದ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಪಂ ಸದಸ್ಯರು, ಪಿಡಿಒಗಳು ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net