

Punjab: ಇಂದಿನ ದಿನಗಳಲ್ಲಿ ಅತ್ತೆ ಸೊಸೆ ಜಗಳ ಎಂಬುದು ಸಾಮಾನ್ಯವಾಗಿ ಬಿಟ್ಟಿರುವಂತಹ ಘಟನೆ. ಆದರೆ ಪಂಜಾಬ್‌ನ ಗುರುದಾಸಪುರದಲ್ಲಿ ಸೊಸೆಯೊಬ್ಬಳು ತನ್ನ ವೃದ್ಧ ಅತ್ತೆಯ ಮೇಲೆ ಮನ ಬಂದಂತೆ ಥಳಿಸುತ್ತಿರುವ ದೃಶ್ಯವನ್ನು ಆಕೆಯ ಮಗನೇ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವೃದ್ಧ ಮಹಿಳೆಯೊಬ್ಬಳು ಮನೆಯಲ್ಲಿರುವ ಸೋಫಾದ ಮೇಲೆ ಕುಳಿತಿರುವುದನ್ನು ಈ ವಿಡಿಯೋ ತೋರಿಸುತ್ತಿದೆ. ಇಲ್ಲಿ ಸೊಸೆಯು ಬಲವಂತವಾಗಿ ಅತ್ತೆಯ ಕೂದಲನ್ನು ಎಳೆಯುತ್ತಿದ್ದಾಳೆ. ಹಾಗೇ ಪದೇ ಪದೇ ನಿಂದಿಸುತ್ತಿದ್ದಾಳೆ. ಈ ವೇಳೆ ವೃದ್ಧ ಮಹಿಳೆಯು ತನ್ನ ಸಹಾಯಕ್ಕಾಗಿ ಬೇಡಿಕೊಳ್ಳುತ್ತಿದ್ದರೂ ಕೂಡ ಆಕೆಯ ಮೇಲೆ ಹಲ್ಲೆ ಮಾಡಿದ್ದಾಳೆ. ಈ ವೇಳೆ ಆಕೆಯ ಮೊಮ್ಮಗ ಅಮ್ಮ ಅಜ್ಜಿಯನ್ನು ಬಿಟ್ಟುಬಿಡು ಎಂದು ಗೋಗರೆಯುತ್ತಿದ್ದರೂ, ಆಕೆ ಉಕ್ಕಿನ ಗಾಜು ಹಾಗೂ ಕೈಗಳಿಂದ ಹಲ್ಲೆ ಮಾಡುತ್ತಿರುವುದನ್ನು ಈ ವಿಡಿಯೋ ತೋರಿಸುತ್ತಿದೆ.
ವಿಡಿಯೋ ಎಲ್ಲೆಡೆ ಪ್ರಚಾರವಾಗುತ್ತಿದ್ದಂತೆಯೇ ಹಿರಿಯರ ಸುರಕ್ಷತೆ, ಅವರ ಹಕ್ಕುಗಳು ಮತ್ತು ರಕ್ಷಣೆ ಆಯೋಗದ ಆದ್ಯತೆಯಾಗಿದೆ. ಆದರಿಂದ ಆರೋಪಿ ಹರ್ಜೀತ್ ಕೌರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಂಜಾಬ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರಾಜ್ ಗಿಲ್ ತಮ್ಮ X (ಎಕ್ಸ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವಾಗುತ್ತಿದ್ದಂತೆಯೇ ಆರೋಪಿ ವಿರುದ್ಧ ಪಂಜಾಬ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಹರ್ಜೀತ್ ಕೌರ್ ಬಹಳ ದಿನಗಳಿಂದ ತನ್ನ ಮಗನಿಗೆ ಹಾಗೂ ನನಗೆ ಕಿರುಕುಳ ನೀಡುತ್ತಿದ್ದಾಳೆ. ಆಸ್ತಿಯನ್ನು ಆಕೆಯ ಹೆಸರಿಗೆ ವರ್ಗಾಹಿಸುವಂತೆ ಒತ್ತಡ ಹೇರಿದ್ದಾಳೆ. ಪ್ರತಿನಿತ್ಯ ಅವಾಚ್ಯ ಶಬ್ಧದಿಂದ ನಿಂದಿಸುತ್ತಾಳೆ ಎಂದು ದೂರು ನೀಡಿದ್ದಾಳೆ. (ಏಜೆನ್ಸೀಸ್)