

ಬೆಂಗಳೂರು: ಸಾಮಾನ್ಯವಾಗಿ ವಯಸ್ಸಾದಂತೆ ಕಪ್ಪು ಕೂದಲು ಬೆಳ್ಳಗಾಗುತ್ತದೆ. ಆದರೆ ಈಗ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಅನೇಕರು ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದರೆ ಕಪ್ಪು ಕೂದಲು ಬಿಳಿಯಾಗಲು ಯಾರೂ ಇಷ್ಟಪಡುವುದಿಲ್ಲ. ಅನೇಕ ಜನರು ತಮ್ಮ ಕೂದಲನ್ನು ಕಪ್ಪಾಗಿಸಲು ಹೇರ್ ಡೈ, ಗೋರಂಟಿ ಮುಂತಾದ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇದು ಹೆಚ್ಚಾಗಿ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುವ ಮನೆಮದ್ದುಗಳು ಮಾತ್ರ ನಿಮಗೆ ಖಂಡಿತ ಪ್ರಯೋಜನಕಾರಿಯಾಗಬಹುದು.
ಕಲೋಂಜಿ (ಫೆನ್ನೆಲ್ ಸೀಡ್ಸ್) ಹೆಸರು ಕೇಳಿರಬೇಕಲ್ಲ, ಇದು ಎಲ್ಲರ ಕೈಗೆಟಕುವ ಅತ್ಯುತ್ತಮ ಮನೆಮದ್ದಾಗಿದೆ. ಇದು ಕೂದಲಿನ ಎಲ್ಲಾ ಸಮಸ್ಯೆಗೆ ತುಂಬಾ ಪ್ರಯೋಜನಕಾರಿ. ಈ ಬೀಜಗಳು ಕೊಬ್ಬಿನಾಮ್ಲಗಳು, ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಜತೆಗೆ ತಲೆಹೊಟ್ಟು ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ಬಿಳಿ ಕೂದಲಿನ ಸಮಸ್ಯೆಗೆ ಫೆನ್ನೆಲ್ ಬೀಜಗಳನ್ನು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ತೆಂಗಿನ ಎಣ್ಣೆಯೊಂದಿಗೆ ಫೆನ್ನೆಲ್ ಸೀಡ್ಸ್ ಬೆರೆಸಿ ಎಣ್ಣೆಯನ್ನು ತಯಾರಿಸಿ. ಇದು ಬಿಳಿ ಕೂದಲನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಎಣ್ಣೆಯನ್ನು ಈ ರೀತಿ ತಯಾರಿಸಿ..
ತೆಂಗಿನ ಎಣ್ಣೆ ಜೊತೆಗೆ ಫೆನ್ನೆಲ್ ಬೀಜಗಳನ್ನು ಸೇರಿಸಿ. ನಂತರ ಎಣ್ಣೆಯನ್ನು 5 ರಿಂದ 10 ನಿಮಿಷಗಳ ಕಾಲ ಬಿಸಿ ಮಾಡಿ. ನಂತರ ಎಣ್ಣೆ ತಣ್ಣಗಾದ ಮೇಲೆ ಅದನ್ನು ಫಿಲ್ಟರ್ ಮಾಡಿ, ಬಾಟಲಿಯಲ್ಲಿ ಇರಿಸಿ. ರಾತ್ರಿ ಮಲಗುವ ಮೊದಲು ಈ ಎಣ್ಣೆಯನ್ನು ನಿಮ್ಮ ಕೂದಲು, ನೆತ್ತಿ ಮತ್ತು ಕೂದಲಿನ ಬೇರುಗಳಿಗೆ ಹಚ್ಚಿ.