ಕೋಟ: ಕೋಟದ ಹಾಡಿಕೆರೆ ಶಾಂತಮೂರ್ತಿ ಶ್ರೀ ಶನೀಶ್ವರ ದೇಗುಲ ವಾರ್ಷಿಕ ವರ್ಧಂತಿ ಹಾಗೂ ನೂತನ ಸಭಾಭವನ ಲೋಕಾರ್ಪಣೆ ಅಂಗವಾಗಿ ಶುಕ್ರವಾರ ಕನ್ನಿಕಾ ದುರ್ಗಾಪರಮೇಶ್ವರಿ ಮಹಾಗಣಪತಿ ಈಶ್ವರ ನಂದಿ ಆಂಜನೇಯ ಕಾಕವಾಹನ ನವಗ್ರಹಗಳಿಗೆ ಕಲಟಶಾಭಿಷೇಕ ಮಹಾಪೂಜೆ, ಚಂಡಿಕಾಹೋಮ, ಮಹಾಮಂಗಳಾರತಿ ಕಾರ್ಯಕ್ರಮ ಸಾಲಿಗ್ರಾಮ ಜನಾರ್ದನ ಅಡಿಗ ನೇತೃತ್ವದಲ್ಲಿ ಜರುಗಿತು.
ದೇಗುಲ ಧರ್ಮದರ್ಶಿ ಭಾಸ್ಕರ್ ಸ್ವಾಮಿ ದಂಪತಿ ಭಾಗಿಯಾದರು. ಶ್ರೀ ಶಾಂತಮೂರ್ತಿ ಶ್ರೀ ಶನೀಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಾಅನ್ನಸಂತರ್ಪಣೆ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ಭಜನಾ ತಂಡಗಳಿಂದ ಗಾನಸುಧೆ ಜರುಗಿತು. ಸಂಜೆ ಬಾಲನಟಿ ತನ್ವಿತಾ ವಿ. ಅವರಿಂದ ಯೋಗಾಸನ ಭರತನಾಟ್ಯ, ಮನು ಹಂದಾಡಿ ಅವರಿಂದ ನಗೆಹಬ್ಬ, ರಾತ್ರಿ 8ರಿಂದ ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ಪುಣ್ಯ ಕಥಾನಕ ನೃತ್ಯರೂಪಕ ಬಿಡುವನೇ ಬ್ರಹ್ಮಲಿಂಗ ಕಾರ್ಯಕ್ರಮ ನಡೆಯಿತು. ದೇಗುಲ ಉತ್ಸವ ಸಮಿತಿ ಪ್ರಮುಖ ದಿನೇಶ್ ಗಾಣಿಗ ಕೋಟ ಮತ್ತಿತರರು ಇದ್ದರು.
