H3N2 ವೈರಸ್ ಭೀತಿ: ಶಾಲೆಗಳಿಗೆ ರಜೆ ಘೋಷಣೆ..!

school
Published on

ಪುದುಚೇರಿ: ಈ ಹಿಂದೆ ಮಹಾಮಾರಿ ಕರೋನಾ ಸೋಂಕು ಎಲ್ಲಡೆ ಹಬ್ಬಿದ ಹಿನ್ನೆಲೆಯಲ್ಲಿ ಲಾಕ್​​ಡೌನ್​​ ಮಾಡಲಾಗಿತ್ತು. ಇದೀಗ H3N2 ವೈರಸ್ ದಾಳಿ ಭೀತಿಯ ಹಿನ್ನೆಲೆಯಲ್ಲಿ ಪುದುಚೇರಿಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

H3N2 ಸೋಂಕಿನ ಭೀತಿ ಹಿನ್ನೆಲೆ ಮಾರ್ಚ್ 16ರಿಂದ 25ರ ತನಕ ಪುದುಚೇರಿಯ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. 1ರಿಂದ 8ನೇ ತರಗತಿವರೆಗಿನ ಎಲ್ಲಾ ಶಾಲೆಗಳನ್ನು ಬಂದ್ ಮಾಡಲಾಗಿದೆ. ಪುದುಚೇರಿಯ ಶಿಕ್ಷಣ ಸಚಿವ ನಮಶಿವಾಯಂ ಈ ಕುರಿತಾಗಿ ಎಲ್ಲಾ ಶಾಲೆ ಹಾಗೂ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಮಕ್ಕಳಲ್ಲಿ ಪ್ರಕರಣ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಶಾಲೆಗೆ ಆಗಮಿಸುತ್ತಿರುವ ಹೆಚ್ಚಿನ ಮಕ್ಕಳು ಆಸ್ಪತ್ರೆ ದಾಖಲಾಗುತ್ತಿದ್ದಾರೆ. ಇತ್ತ ಹಲವು ಮಕ್ಕಳು ಜ್ವರ, ಶೀತ, ಕೆಮ್ಮು ಕಾರಣದಿಂದ ಗೈರಾಗುತ್ತಿದ್ದಾರೆ.  ಅನಿವಾರ್ಯವಾಗಿ ರಜೆ ಘೋಷಿಸಲಾಗಿದೆ. ಮುಂದಿನ 10 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ, ಮಕ್ಕಳ ಆರೋಗ್ಯ ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪುದುಚೇರಿ ಆರೋಗ್ಯ ಸಚಿವರು ಹೇಳಿದ್ದಾರೆ.

ಪುದುಚೇರಿಯಲ್ಲಿ ಇದುವರೆಗೆ H3N2 ಸೋಂಕಿನ ಪ್ರಕರಣ ವರದಿಯಾಗಿದೆ. ಸೋಂಕಿನಿಂದ ಯಾರು ಮೃತಪಟ್ಟಿಲ್ಲ. ಮುನ್ನೆಚ್ಚರಿಕೆಯಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕರ್ನಾಟಕ, ಹರ್ಯಾಣ ಮತ್ತು ಗುಜರಾಜ್‌, ತಮಿಳುನಾಡಿನಲ್ಲಿ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ. H3N2 ವೈರಸ್ ನಿಂದ ದೇಶದಲ್ಲಿ ಇದುವರೆಗೆ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net