ಬಿಲ್ಡಿಂಗ್​ನಿಂದ ಹಾರಿದರೂ ಬಿಡದೆ ದಾಳಿ ಮಾಡಿದ ರೌಡಿಗಳು; ಸಂತ್ರಸ್ತ ಆಸ್ಪತ್ರೆಗೆ ದಾಖಲು…

crime
Published on

ಬೆಂಗಳೂರು: ನಗರದಲ್ಲಿ ವ್ಯಕ್ತಿ ಒಬ್ಬನ ಮೇಲೆ ತಡರಾತ್ರಿ ಭೀಕರ ದಾಳಿ ನಡೆದಿದೆ. ಇದು ಪಕ್ಕಾ ಸಿನಿಮೀಯ ಕಥೆ ಎಂದೇ ಅನಿಸಬಹುದು. ಆದರೆ ಈ ಘಟನೆ ನಿಜವಾಗಿಯೂ ನಡೆದಿದೆ.

ಕಾಮಾಕ್ಷಿ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸುಂಕದಕಟ್ಟೆಯ ಮುತ್ತುರಾಯಸ್ವಾಮಿ ದೇವಸ್ಥಾನದ ಬಳಿ ನಿನ್ನೆ ತಡರಾತ್ರಿ ನವೀನ್ ಎಂಬಾತನ ಮೇಲೆ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸಂತ್ರಸ್ತ ನವೀನ್​ ತಪ್ಪಿಸಿಕೊಳ್ಳಲು ಥೇಟ್​ ಸಿನಿಮೀಯ ರೀತಿಯಲ್ಲಿ ಬಿಲ್ಡಿಂಗ್​ನಿಂದ ಹಾರಿದ್ದಾನೆ. ಆದರೆ ಈತನ್ನು ಮುಗಿಸಲೇ ಬೇಕು ಎಂದು ಪಣ ತೊಟ್ಟಿದ್ದ ರೌಡಿಗಳು ಅಟ್ಟಾಡಿಸಿಕೊಂಡು ಹೋಗಿದ್ದಾರೆ.

ಸಂತ್ರಸ್ತ ನವೀನನನ್ನು ಓಡಿಸಿಕೊಂಡು ಹೋಗಿ ಮಚ್ಚಿನಿಂದ ಕೊಚ್ಚಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಘಟನೆಯಲ್ಲಿ ನವೀನ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರಕರಣವನ್ನು ಸದ್ಯ ಕಾಮಾಕ್ಷಿಪಾಳ್ಯ ಪಾಳ್ಯ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈಗ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net