

ಮುಂಬೈ: ಬಾಂದ್ರಾದ ಹುಡುಗಿಯೊಬ್ಬಳು ತನ್ನ 10 ನೇ ತರಗತಿಯ ಬೋರ್ಡ್ ಪರೀಕ್ಷೆಯ ಪತ್ರಿಕೆಯನ್ನು ಆಂಬ್ಯುಲೆನ್ಸ್‌ನಲ್ಲಿ ಬರೆದಿದ್ದಾಳೆ. ಈ ಘಟನೆ ಮುಂಬೈನ ಬಾಂದ್ರಾದಲ್ಲಿ ನಡೆದಿದೆ.
ಅಂಜುಮನ್-ಐ-ಇಸ್ಲಾಂ ಶಾಲೆಯ ವಿದ್ಯಾರ್ಥಿನಿ ಮುಬಾಶಿರಾ ಸಾದಿಕ್ ಸಯ್ಯದ್ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಆಕೆಯ ಎಡ ಪಾದಕ್ಕೆ ಗಂಭೀರವಾದ ಗಾಯಗಳಾಗಿದ್ದು, ಅದೇ ದಿನ ಆಕೆಗೆ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಆದರೆ ಆಪರೇಷನ್ ಥಿಯೇಟರ್‌ಗೆ ಪ್ರವೇಶಿಸುವ ಮೊದಲು ಮುಬಾಶಿರಾ, ತನ್ನ ಶಾಲಾ ಶಿಕ್ಷಕರಿಗೆ ಪರೀಕ್ಷೆ ಬರೆಯುವುದಾಗಿ ತಿಳಿಸಿದ್ದಾಳೆ.
ಶಾಲಾ ಮಂಡಳಿಯ ಕಾರ್ಯದರ್ಶಿ ಸುಭಾಷ್ ಬೊರಸೆ, ಆಂಬ್ಯುಲೆನ್ಸ್‌ನಲ್ಲಿ ಎಕ್ಸಾಂ ಬರೆಯಲು ವಿದ್ಯಾರ್ಥಿನಿಗೆ ಅವಕಾಶ ನೀಡಲು ಅನುಮತಿ ನೀಡಿದರು. ಆ ಪ್ರಕಾರ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಯಿತು. ಶಾಲೆಗಳು ಉಪಕ್ರಮವನ್ನು ತೆಗೆದುಕೊಂಡವು ಮತ್ತು ಅವಳಿಗೆ ಆರ್ಥಿಕ ಸಹಾಯವನ್ನು ನೀಡಿತು .
'ನನ್ನ ಶಿಕ್ಷಕರು ನನ್ನನ್ನು ಪರೀಕ್ಷೆಗೆ ಬರುವಂತೆ ಪ್ರೋತ್ಸಾಹಿಸಿದರು. ಅಲ್ಲದೆ, ನನ್ನ ಹೆತ್ತವರು ನನ್ನ ಹಿಂದೆ ಬೆಂಬಲವಾಗಿ ನಿಂತರು. ಇಂಥಾ ಸಂದರ್ಭದಲ್ಲಿ ನನಗೆ ಸಹಾಯ ಮಾಡಿದ ನನ್ನ ಎಲ್ಲಾ ಶಿಕ್ಷಕರಿಗೆ ಮತ್ತು ನನಗೆ ಆಂಬ್ಯುಲೆನ್ಸ್ ಒದಗಿಸಿದ್ದಕ್ಕಾಗಿ ಕ್ಯಾನ್ಸರ್ ನೆರವು ಮತ್ತು ಸಂಶೋಧನಾ ಪ್ರತಿಷ್ಠಾನಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಈಗ ಅದೇ ರೀತಿ ಮುಂದಿನ ಎಕ್ಸಾಂ ಬರೆಯಲಿದ್ದೇನೆ' ಎಂದು ಮುಬಾಶಿರಾ ಹೇಳಿದರು.