ಹೊಸತನಕ್ಕೆ ಶಿಕ್ಷಣ ಏಕಮಾತ್ರ ಮಾಧ್ಯಮ : ಗುರುತತ್ವವಾಹಿನಿ 26ನೇ ಮಾಲಿಕೆಯಲ್ಲಿ ರಾಜೇಶ್ ಸುವರ್ಣ ಅನಿಸಿಕೆ

New Project (6)
Published on

ಬಂಟ್ವಾಳ: ಯುವವಾಹಿನಿ ಬಂಟ್ವಾಳ ಘಟಕದ ವತಿಯಿಂದ ನಡೆಯುತ್ತಿರುವ ವಾರಕ್ಕೊಂದು ಗುರುತತ್ವವಾಹಿನಿ ಕಾರ್ಯಕ್ರಮದ 26ನೇ ಮಾಲಿಕೆ ಬಂಟ್ವಾಳ ಯುವವಾಹಿನಿ ಆರೋಗ್ಯ ನಿರ್ದೇಶಕ ಮಹೇಶ್ ಬೊಳ್ಳಾಯಿ ಮನೆಯಲ್ಲಿ ನಡೆಯಿತು.

ಬಂಟ್ಟಾಳ ಯುವವಾಹಿನಿ ಘಟಕದ ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ ಗುರು ಸಂದೇಶ ನೀಡಿ, ಯಾವುದೇ ಸಮಾಜವು ಹಳೆಯ ಅನಗತ್ಯ ಜಾಡ್ಯಗಳನ್ನು ಬಿಟ್ಟು ಬಿಡಲು ಮತ್ತು ಹೊಸತನವನ್ನು ರೂಢಿಸಿಕೊಳ್ಳಲು ಶಿಕ್ಷಣವೇ ಏಕಮಾತ್ರ ಮಾಧ್ಯಮ ಎಂದು ನಾರಾಯಣಗುರುಗಳು ಪ್ರತಿಪಾದಿಸಿದ್ದರು ಎಂದು ತಿಳಿಸಿದರು.

ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ಉಪಾಧ್ಯಕ್ಷ ನಾರಾಯಣ ಪಲ್ಲಿಕಂಡ, ನಿರ್ದೇಶಕರಾದ ಉದಯ್ ಮೆನಾಡ್, ಮಧುಸೂದನ್ ಮಧ್ವ, ನಿಕಟಪೂರ್ವ ಅಧ್ಯಕ್ಷ ಹರೀಶ್ ಕೊಟ್ಯಾನ್ ಕುದನೆ, ಮಾಜಿ ಅಧ್ಯಕ್ಷ ನಾಗೇಶ್ ಪೊನ್ನೋಡಿ, ಗಣೇಶ್ ಪೂಂಜರೆಕೋಡಿ, ಪ್ರೇಮನಾಥ್ ಕೆ., ಶಿವಾನಂದ ಎಂ., ರಾಜೇಶ್ ಸುವರ್ಣ, ಅರುಣ್ ಕುಮಾರ್, ಸದಸ್ಯರಾದ, ಪ್ರಶಾಂತ್ ಏರಮಲೆ, ಹರೀಶ್ ಅಜೆಕಲಾ, ಅರ್ಜುನ್ ಅರಳ, ಅಶ್ವಿನ್ ಬೊಳ್ಳಾಯಿ, ವಿಘ್ನೇಶ್ ಬೊಳ್ಳಾಯಿ, ಶ್ರಜನಿ ನಗ್ರಿ, ನಿಕೇಶ್ ಕೊಟ್ಯಾನ್, ಯಶೋಧರ ಕಡಂಬಲ್ಕೆ, ಸಂಕೇತ್ ಅರಳ, ನಿಕಿತಾ ಬೊಳ್ಳಾಯಿ ಮತ್ತಿತರರು ಉಪಸ್ಥಿತರಿದ್ದರು.

ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.

\https://www.vijayavani.net/new-brahmaratha-for-chennakesava

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net