

ಗುರುಪುರ: ಜಗತ್ತಿನಾದ್ಯಂತ ಮಠ-ಆಶ್ರಮಗಳಲ್ಲಿ ವ್ಯಾಸ ಪೂರ್ಣಿಮೆಯನ್ನೇ ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತಿದೆ. ಹಿಂದುಗಳಲ್ಲದೆ ಅನ್ಯ ಸಂಪ್ರದಾಯದವರಿಗೂ ಇದು ವಿಶೇಷ ಗುರು ಪೂರ್ಣಿಮೆಯಾಗಿರುತ್ತದೆ ಎಂದು ಪೊಳಲಿಯ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ ಹೇಳಿದರು.
ಗುರು ಪೂರ್ಣಿಮೆ ಪ್ರಯುಕ್ತ ಪೊಳಲಿ ತಪೋವನ ಆಶ್ರಮದಲ್ಲಿ ವಿಶೇಷ ಹೋಮ ನೆರವೇರಿಸಲಾಯಿತು. ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಭಕ್ತರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪೂಜಾ ಸಂದರ್ಭದಲ್ಲಿ ಆಶ್ರಮಕ್ಕೆ ಭೇಟಿ ನೀಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.