ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೋ..ಎಫ್‌ಐಆರ್ ದಾಖಲಿಸಿದ ಗುಜರಾತ್ ಪೊಲೀಸರು

nirmala
Published on

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಡೀಪ್‌ಫೇಕ್ ವಿಡಿಯೋವನ್ನು ಶೇರ್ ಮಾಡಿದ್ದಕ್ಕಾಗಿ ವ್ಯಕ್ತಿಯೊಬ್ಬನ ವಿರುದ್ಧ ಗುಜರಾತ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಗೃಹ ಖಾತೆ ರಾಜ್ಯ ಸಚಿವ ರಾಜ್ಯ ಸಚಿವ ಹರ್ಷ ಸಾಂಘ್ವಿ ಈ ಮಾಹಿತಿ ನೀಡಿದ್ದಾರೆ. ವೀಡಿಯೊ ಕ್ಲಿಪ್‌ನಲ್ಲಿ, ಸೀತಾರಾಮನ್ ಅವರು ಮಾಧ್ಯಮವನ್ನು ಉದ್ದೇಶಿಸಿ ಜಿಎಸ್‌ಟಿಯನ್ನು ಗೌಪ್ಯ ಮಾಹಿತಿ ತೆರಿಗೆ ಎಂದು ಕರೆಯುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನು ಚಿರಾಗ್ ಪಟೇಲ್ ಎಂಬ ವ್ಯಕ್ತಿ ತನ್ನ 'X' ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಪಟೇಲ್ ಅವರ 'ಎಕ್ಸ್' ಪ್ರೊಫೈಲ್ ಪ್ರಕಾರ, ಆತ ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ.

ಜನರನ್ನು ದಾರಿತಪ್ಪಿಸಲು ನಕಲಿ ವೀಡಿಯೊಗಳನ್ನು ಹರಡುವ ಕ್ರಮ ಅಸಹ್ಯಕರವಾಗಿದೆ ಎಂದು ಸಚಿವ ಹರ್ಷ್ ಸಾಂಘ್ವಿ ಹೇಳಿದ್ದಾರೆ. ಸಾಂಘ್ವಿ 'ಎಕ್ಸ್' ನಲ್ಲಿ, "ನಕಲಿ ವಿಡಿಯೋವನ್ನು ಹರಡಿದ ವ್ಯಕ್ತಿಯ ವಿರುದ್ಧ ಗುಜರಾತ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಜನರನ್ನು ದಾರಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಸುದ್ದಿಗಳನ್ನು ಯಾರೂ ನಂಬಬಾರದು. ಡಿಜಿಟಲ್ ಜಾಗದಲ್ಲಿ ಸತ್ಯ ಮತ್ತು ಹೊಣೆಗಾರಿಕೆಗೆ ಆದ್ಯತೆ ನೀಡಬೇಕು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net