ಸರ್ಕಾರ ಅತಿಥಿ ಉಪನ್ಯಾಸಕರ ಪರವಾಗಿದೆ:ಸಚಿವ ಶಿವರಾಜ ತಂಗಡಗಿ

guest lectures protest minister shivaraj tangadagi visit koppal
ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅತಿಥಿ ಉಪನ್ಯಾಸಕರು ಶುಕ್ರವಾರ ಕೊಪ್ಪಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಗೆ ಮನವಿ ಸಲ್ಲಿಸಿದರು. ಅತಿಥಿ ಉಪನ್ಯಾಸಕರಾದ ಈರಣ್ಣ ಸಜ್ಜನರ, ಡಾ.ಪ್ರಕಾಶ ಬಳ್ಳಾರಿ, ಡಾ.ಗಂಗಮ್ಮ, ಶಿವಪ್ರಕಾಶ ಹಾದಿಮನಿ, ಉಮೇಶ ಕಾತರಕಿ ಇದ್ದರು.
Published on

ಕೊಪ್ಪಳ:ಅತಿಥಿ ಉಪನ್ಯಾಸಕರ ಬೇಡಿಕೆ ಸರ್ಕಾರದ ಗಮನಕ್ಕಿದೆ. ಸಿಎಂ ಸಿದ್ದರಾಮಯ್ಯ ಮತ್ತು ನಮ್ಮ ಸರ್ಕಾರ ಕೊಟ್ಟ ಮಾತು ತಪು$್ಪವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಧರಣಿ ನಿರತ ಅತಿಥಿ ಉಪನ್ಯಾಸಕರ ಮನವಿ ಸ್ವೀಕರಿಸಿ ಶುಕ್ರವಾರ ಮಾತನಾಡಿದರು.

ಚುನಾವಣೆ ಪ್ರಳಾಣಿಕೆಯಲ್ಲಿ ಅತಿಥಿ ಉಪನ್ಯಾಸಕರ ಸೇವಾ ಕಾಯಂ ವಿಷಯ ಇದೆ ಎಂದು ಹೇಳುತ್ತಿದ್ದೀರಿ. ಸಿಎಂ ಸಿದ್ದರಾಮಯ್ಯ ಪ್ರಣಾಳಿಕೆಯಲ್ಲಿನ ಭರವಸೆ ಈಡೇರಿಸುವಲ್ಲಿ ಬದ್ಧರಾಗಿದ್ದಾರೆ. ಈ ಹಿಂದೆ ನಮ್ಮ ಸರ್ಕಾರ 165 ಭರವಸೆಗಳನ್ನು ಈಡೇರಿಸಿದೆ.

ಜತೆಗೆ ಹೆಚ್ಚುವರಿ ಯೋಜನೆಗಳನ್ನು ಜಾರಿಗೊಳಿಸಿದ್ದೆವು. ನಮ್ಮ ಸರ್ಕಾರ ಮಾತು ಕೊಟ್ಟರೆ ಉಳಿಸಿಕೊಳ್ಳುತ್ತದೆ ಎಂಬುದಕ್ಕೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವದೇ ಸಾ ಎಂದರು.

ವಿಪಕ್ಷದವರು ಐದು ವರ್ಷದವರೆಗೆ ಗ್ಯಾರಂಟಿ ಯೋಜನೆಗಳನ್ನೇ ಹೇಳುತ್ತಾರೆ ಎಂದು ಜರಿದಿದ್ದರು. ಆದರೆ, ನಾಲ್ಕು ತಿಂಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಇನ್ನೊಂದನ್ನು ಅನುಷ್ಠಾನ ಮಾಡಲಾಗುವುದು. ಅದರಂತೆ ನಿಮ್ಮ ಬೇಡಿಕೆಯನ್ನೂ ಈಡೇರಿಸಲಾಗುವುದು.

ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಸುಧಾಕರ ಹಾಗೂ ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದು ಪರಿಹರಿಸುವಂತೆ ಒತ್ತಾಯಿಸುವೆ. ಇಷ್ಟು ದಿನ ಧರಣಿ ನಡೆಸಿದ್ದು ಸಾಕು. ಮಕ್ಕಳ ಭವಿಷ್ಯ ದೃಷ್ಟಿಯಿಂದ ನೀವೆಲ್ಲ ತರಗತಿಗಳನ್ನು ನಡೆಸಿ ಎಂದು ಮನವಿ ಮಾಡಿದರು.

ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ್​ ಹಿಟ್ನಾಳ್​, ಸಿಡಿಸಿ ಸದಸ್ಯ ಮಂಜುನಾಥ ಗೊಂಡಬಾಳ, ಡಿಸಿ ನಲಿನ್​ ಅತುಲ್​, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಅತಿಥಿ ಉಪನ್ಯಾಸಕರಾದ ಈರಣ್ಣ ಸಜ್ಜನರ, ಡಾ.ಪ್ರಕಾಶ ಬಳ್ಳಾರಿ, ಡಾ.ಗಂಗಮ್ಮ, ಶಿವಪ್ರಕಾಶ ಹಾದಿಮನಿ, ಉಮೇಶ ಕಾತರಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net