

ಕೂಡ್ಲಿಗಿ: ಮಳೆಗಾಗಿ ಪ್ರಾರ್ಥಿಸಿ ಜನರು ತಾಲೂಕಿನ ಗುಡೇಕೋಟೆ ಕಾಳಿಕಾ ದೇವಿಯ ಗರ್ಭಗುಡಿಯನ್ನು ಮಂಗಳವಾರ ಜಲದಿಗ್ಬಂದಗೊಳಿಸಿದರು.
ಸಮರ್ಪಕವಾಗಿ ಮಳೆ ಬಾರದ್ದರಿಂದ ಬರಗಾಲದ ಛಾಯೆ ಆವರಿಸುವಂತಾಗಿದೆ. ಇದನ್ನು ತಪ್ಪಿಸಲು ಗ್ರಾಮಸ್ಥರು ದೇವಿಯ ಮೊರೆ ಹೋಗಿದ್ದಾರೆ. ಯುವಕರು 521 ಕೊಡವನ್ನು ನೀರು ಹಾಕಿ ದೇವಿಯ ಗರ್ಭಗುಡಿಯನ್ನು ಜಲ ದಿಗ್ಭಂಧನ ಮಾಡಿದರು. ಮಹಿಳೆಯರು ಪ್ರಾರ್ಥನೆ ಸಲ್ಲಿಸಿದರು. ಮಳೆ ಬರುವವರೆಗೂ ಗರ್ಭಗುಡಿಯ ಬಾಗಿಲು ತರೆಯದಂತೆ ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಜಲದಿಗ್ಬಂಧನ ಪದ್ಧತಿ ಪೂರ್ವಜರ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಹಿರಿಯರು, ಪ್ರತಿ ಬಾರಿ ಪೂಜೆ ಸಲ್ಲಿಸಿದಾಗಲೂ ಮಳೆ ಬಂದಿದೆ. ದೇವರು ಈಗಲೂ ಉತ್ತಮ ಮಳೆ ಸುರಿಸಿ ರೈತರನ್ನು ಕಾಪಾಡಬೇಕು. ಮಳೆಯಿಲ್ಲದೆ, ಹಳ್ಳ-ಕೊಳ್ಳ, ಕೆರೆಗಳಲ್ಲಿ ನೀರು ಖಾಲಿಯಾಗುತ್ತಿವೆ. ಬೆಳೆದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಬೋರ್ವೆಲ್ಗಳಲ್ಲೂ ನೀರಿನ ಮಟ್ಟ ಕುಸಿಯುತ್ತಿದೆ. ಮಳೆ ಬಾರದಿದ್ದರೆ ರೈತರ ಬದುಕು ಕಷ್ಟಕರವಾಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ಗ್ರಾಮಸ್ಥರಾದ ಬಲ್ಲನಾಯಕ ನಿಂಗಣ್ಣ, ಬಂಗಾಳಿ ಓಬಯ್ಯ, ವೈ.ಬೋಮ್ಮಣ್ಣ, ಗಾಂಧಿ, ಸುರೇಶ್, ನಾರಾಯಣಪ್ಪ, ಕುಮಾರ್, ರಾಜೇಶ್, ಕೌಶಿಕ್, ಸೂರಲಿಂಗ, ಸುರೇಶ್, ಎರ್ರಿಸ್ವಾಮಿ, ವೆಂಕಟೇಶ್, ಶಿವಕುಮಾರ್, ನಂದೀಶ ಇನ್ನಿತರರಿದ್ದರು.