ತಿರುವು ರಸ್ತೆ ಅಭಿವೃದ್ಧಿಗೆ ಅನುದಾನ : ಮುಸ್ತಫಾ ಹರೇಕಳ ಹೇಳಿಕೆ

New Project (34)
Published on

ಉಳ್ಳಾಲ: ತಿಂಗಳ ಹಿಂದೆ ನೇತ್ರಾವತಿ ಸೇತುವೆ ಒಂದು ಭಾಗ ಮುಚ್ಚಿದಾಗ ಹರೇಕಳ ರಸ್ತೆ ಮೂಲಕ ವಾಹನಗಳ ಸಂಚಾರ ಹೆಚ್ಚಾಗಿ ಸಾಕಷ್ಟು ಅಪಘಾತಗಳು ಸಂಭವಿಸಿದೆ, ಈ ಬಗ್ಗೆ ಸ್ಪೀಕರ್ ಜತೆ ಮಾತುಕತೆ ನಡೆಸಿದ ಫಲವಾಗಿ ತಿರುವು ಅಭಿವೃದ್ಧಿಗೆ ಅನುದಾನ ನೀಡಿದ್ದಾರೆಂದು ಮಂಗಳೂರು ತಾ.ಪಂ.ಮಾಜಿ ಸದಸ್ಯ ಮುಸ್ತಫಾ ಹರೇಕಳ ತಿಳಿಸಿದರು.

ಹರೇಕಳ-ಗ್ರಾಮ ಚಾವಡಿ ಸಂಪರ್ಕ ರಸ್ತೆಯ ಕಡವಿನ ಬಳಿಯಿಂದ ರಾಮಕೃಷ್ಣ ಶಾಲೆವರೆಗೆ ತಿರುವು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ನಡೆದ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹರೇಕಳಕ್ಕೆ ಈಗಾಗಲೇ ಆಸ್ಪತ್ರೆ ನಿರ್ಮಾಣವಾಗಿದ್ದು ಶೀಘ್ರ 24 ಗಂಟೆ ಸೇವೆ ಆರಂಭಗೊಳ್ಳಲಿದೆ. ಅಡ್ಯಾರ್-ಹರೇಕಳ ಸಂಪರ್ಕ ಸೇತುವೆ ನಿರ್ಮಾಣದ ಬಳಿಕ ಈ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಈ ಬಗ್ಗೆ ಸ್ಪೀಕರ್ ಗಮನಕ್ಕೆ ತರಲಾಗಿತ್ತು. ಕೆಲವು ಸಂದರ್ಭಗಳಲ್ಲಿ ಸ್ಪೀಕರ್ ಕೂಡ ಇದೇ ರಸ್ತೆ ಮೂಲಕ ಮಂಗಳೂರು, ಫರಂಗಿಪೇಟೆ ಸಂಚಾರ ಮಾಡುವುದರಿಂದ ಸಮಸ್ಯೆ ಅರಿತು ಅನುದಾನ ನೀಡಿದ್ದು, ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಗುಲಾಬಿ ಗುದ್ದಲಿ ಪೂಜೆ ನೆರವೇರಿಸಿದರು. ಉಪಾಧ್ಯಕ್ಷ ಮಜೀದ್ ಎಂ.ಪಿ., ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ, ಗ್ರಾಪಂ ಸದಸ್ಯರಾದ ಸತ್ತಾರ್ ಬಾವಲಿಗುರಿ, ಅಬೂಬಕ್ಕರ್ ಸಿದ್ದೀಕ್, ಮಹಮ್ಮದ್ ರಫೀಕ್, ಕಲ್ಯಾಣಿ, ಮಾಜಿ ಅಧ್ಯಕ್ಷ ಮಹಾಬಲ ಹೆಗ್ಡೆ ದೆಬ್ಬೇಲಿಗುತ್ತು, ಪ್ರಮುಖರಾದ ಶೇಖರ್ ಪೂಜಾರಿ ಕಡವಿನಬಳಿ, ಯೂಸುಫ್ ಗುಡ್ಡುಪಾಲ್, ಸಂತೋಷ್ ಡಿಸೋಜ, ಹಸೈನಾರ್ ದೆಬ್ಬೇಲಿ, ಅಬ್ದುಲ್ ಅಝೀಝ್ ರಾಜಗುಡ್ಡೆ, ಅಬ್ದುಲ್ ಲತೀಫ್ ರಾಜಗುಡ್ಡೆ, ಬದ್ರುದ್ದೀನ್ ರಾಜಗುಡ್ಡೆ, ರಫೀಕ್ ಪೋಡಾರ್ ಸೈಟ್, ಝಕರಿಯಾ ಮಲಾರ್ ಉಪಸ್ಥಿತರಿದ್ದರು.

ಗ್ರಾಪಂ ಮಾಜಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಸ್ವಾಗತಿಸಿ, ಮಾಜಿ ಸದಸ್ಯ ಬಶೀರ್ ಉಂಬುದ ವಂದಿಸಿದರು.

ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸ್ಪೀಕರ್ ಅವರು ಸುಮಾರು 1400 ಕೋಟಿ ರೂ.ಅನುದಾನ ತಂದಿದ್ದಾರೆ. ಹರೇಕಳದಲ್ಲಿ ನಿರ್ಮಾಣಗೊಂಡಿರುವ ಸೇತುವೆ ಸಾರ್ವಜನಿಕರಿಗೆ ಬಹಳಷ್ಟು ಪ್ರಯೋಜನ ಆಗಿದೆ, ಮುಂದಕ್ಕೆ ತೂಗು ಸೇತುವೆ ಸಹಿತ ಕ್ಷೇತ್ರದಲ್ಲಿ ಎರಡು ಸೇತುವೆಗಳ ನಿರ್ಮಾಣವಾಗಲಿದೆ. ಒಳರಸ್ತೆಗಳಿಗೂ ಅನುದಾನ ಮಂಜೂರುಗೊಂಡಿದೆ. ರಮೇಶ್ ಶೆಟ್ಟಿ ಬೋಳಿಯಾರ್, ಅಧ್ಯಕ್ಷ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ https://www.vijayavani.net/book-and-bag-distribution https://www.vijayavani.net/haalengadi-railway-junction-problem

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net