

ರಾಯಚೂರು: ನಗರದ ತಹಸಿಲ್ ಕಚೇರಿಯಲ್ಲಿ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯು ಸಮಿತಿಯ ಅಧ್ಯಕ್ಷ ಪವನ್ ಕಿಶೋರ್ ಪಾಟೀಲ್ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿತು.
ಸಭೆಯಲ್ಲಿ ತಾಲೂಕು ಮಟ್ಟದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಆಯಾ ಯೋಜನೆಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಯೋಜನೆಯನ್ನು ಜನರಿಗೆ ತಲುಪಿಸುವಲ್ಲಿ ತೊಡಕುಗಳಾದಂತೆ ನೋಡಿಕೊಳ್ಳಿ ಎಂದು ಪವನ್ ಪಾಟೀಲ್ ಸೂಚಿಸಿದರು.
ಇದನ್ನೂ ಓದಿ: ಗ್ಯಾರಂಟಿಗೆ ಎಸ್ಸಿ-ಎಸ್ಟಿ ಅನುದಾನ ಬಳಕೆ ಸಲ್ಲ
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಹಂಪನಗೌಡ, ರಾಧಾಕೃಷ್ಣ ರೆಡ್ಡಿ, ಕೆ.ಈರಣ್ಣ, ವಿ.ಮಂಜುನಾಥ, ವೀರೇಶ, ಲಚ್ಚಪ್ಪ ನಾಯಕ್, ತಿಮ್ಮಪ್ಪ, ವಿಶ್ವನಾಥ, ವೆಂಕಟೇಶ ನಾಯಕ್, ರಘು ಮಡಿವಾಳ, ಭಾರತಿ, ಮಹ್ಮದ್ ಜಾವಿದ, ತಾಲೂಕು ಪಂಚಾಯತ್ ಇಒ ಚಂದ್ರಶೇಖರ್ ಪವಾರ್ ಸೇರಿದಂತೆ ಇತರರಿದ್ದರು.