ಮಹಿಳೆಯನ್ನು ಕೋಲು, ಕಬ್ಬಿಣದ ರಾಡ್​​ಗಳಿಂದ ಥಳಿಸಿದ ಮಹಿಳೆಯರು..!

Woamn
Published on

ಭಿವಾನಿ: ಐದಾರು ಮಹಿಳೆಯರ ಗುಂಪು ಮತ್ತೋರ್ವ ಮಹಿಳೆಗೆ ಕೋಲು, ಕಬ್ಬಿಣದ ರಾಡ್​​ನಿಂದ ಹಲ್ಲೆ ಮಾಡಿದ ಘಟನೆ ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿದೆ.

ಆಗಸ್ಟ್​ 28ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಓರ್ವ ಮಹಿಳೆ ನೆಲದ ಮೇಲೆ ಬಿದ್ದಿದ್ದಾರೆ. ಅವರನ್ನು ಸುತ್ತುವರಿದಿರುವ ಐದಾರು ಮಹಿಳೆಯರ ಕೈಯಲ್ಲಿ ಕೋಲು, ರಾಡ್​ಗಳು ಇವೆ. ಎಲ್ಲರೂ ಸೇರಿ ಆಕೆಗೆ ಹೊಡೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ಫಾಸ್ಟ್​ಫುಡ್​ ಮಳಿಗೆ ಹೊರಗೆ ಲ್ಯಾಪ್​ಟಾಪ್​ ಹಿಡಿದು ಕುಳಿತಿದ್ದ ಬಾಲೆಯರಿಗೆ ಹರಿದು ಬಂತು ಒಂದು ಕೋಟಿ ರೂ. ನೆರವು..! ಏಕೆ ಗೊತ್ತೆ?

ದೇವಸ್ಥಾನದಲ್ಲಿ ಧೋಲಕ್​ ನುಡಿಸುವುದಕ್ಕೆ ಸಂಬಂಧಪಟ್ಟಂತೆ ವಿವಾದ ನಡೆದಿದೆ. ಅದಾದ ಬಳಿಕ ಮಹಿಳೆಯ ಮೇಲೆ ಆಕೆಯ ಸಂಬಂಧಿಕರೇ ಹಲ್ಲೆ ಮಾಡಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆಗೊಳಗಾದ ಮಹಿಳೆಯ ಕಡೆಯವರು ಮೊದಲು ಮತ್ತೊಂದು ಗುಂಪಿನ ಓರ್ವರ ಮೇಲೆ ಹಲ್ಲೆ ನಡೆಸಿದ್ದರು. ಅದರ ಪ್ರತೀಕಾರವೆಂಬಂತೆ ಈಕೆಗೆ ಹೊಡೆದಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net