More

    ಒಂದೇ ಮಂಟಪದಲ್ಲಿ ನಾಲ್ವರನ್ನು ಮದುವೆಯಾದ ವರ; ‘ಅದೃಷ್ಟ ಅಂದ್ರೆ ನಿಂದು ಗುರು’ ಎಂದ್ರು ನೆಟ್ಟಿಗರು

    ನವದೆಹಲಿ: ಕಳೆದ ವರ್ಷ ಜಾರ್ಖಂಡ್‌ನಲ್ಲಿ ಸಂದೀಪ್ ಎಂಬ ವ್ಯಕ್ತಿ ಒಂದೇ ವೇದಿಕೆಯಲ್ಲಿ ಇಬ್ಬರು ಯುವತಿಯರನ್ನು ಮದುವೆಯಾಗಿದ್ದು ಭಾರೀ ವೈರಲ್ ಆಗಿತ್ತು. ಈಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ. ಆದರೆ ಈಗ ವರನೊಬ್ಬ 4 ವಧುಗಳನ್ನು ಒಂದೇ ಬಾರಿಗೆ ಮದುವೆ ಮಾಡಿದ್ದಾನೆ.

    ಸಾಂಪ್ರದಾಯಿಕ ಉಡುಗೆ ತೊಟ್ಟ ನಾಲ್ವರು ಯುವತಿಯರನ್ನು ವರನೊಬ್ಬ ಏಕಕಾಲಕ್ಕೆ ವಿವಾಹವಾಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮಾಷೆ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಮದುವೆಯ ಅರ್ಥವನ್ನು ಬದಲಾಯಿಸುತ್ತದೆ. ನಿನ್ನ ಧೈರ್ಯ ನಾವು ಮೆಚ್ಚಲೇ ಬೇಕು. ನೀನೆ ಅದೃಷ್ಟವಂತ ಎಂದು ಕಾಮೆಂಟ್​ ಮಾಡುತ್ತಿದ್ದಾರೆ. ಈ ಮದುವೆ ಎಲ್ಲಿ ನಡದಿದ್ದು ಎನ್ನುವ ಮಾಹಿತಿ ಇಲ್ಲ.

    ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡ ವಿಡಿಯೋದಲ್ಲಿ, ವರನು ಬಿಳಿ ಬಟ್ಟೆಯನ್ನು ಧರಿಸಿದ್ದು,  ಸಾಂಪ್ರದಾಯಿಕವಾಗಿ ಅಲಂಕರಿಸಲ್ಪಟ್ಟ ವಧುಗಳಿಂದ ಸುತ್ತುವರೆದಿರುವುದನ್ನು ಕಾಣಬಹುದು. ಕೊನೆಯಲ್ಲಿ ನಾಲ್ವರೂ ಪತಿಯ ಪಾದ ಮುಟ್ಟಿ ಆಶೀರ್ವಾದ ಪಡೆದರು.  ‘ತುಮ್ ಜೀತ್ ಗಯೇ ಔರ್ ಹಮ್ ಹರೇ’ ಹಾಡು ವೀಡಿಯೊದಲ್ಲಿ ಕೇಳಿಬರುತ್ತಿದೆ. 

    ಕಳೆದ ವರ್ಷ ಕೂಡಾ ಜಾರ್ಖಂಡ್‌ನಲ್ಲಿ ಇಂತಹದ್ದೆ ಘಟನೆ ನಡೆಡಿತ್ತು. ಸಂದೀಪ್ ಎಂಬ ವ್ಯಕ್ತಿ ಒಂದೇ ಮದುವೆ ಸಮಾರಂಭದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದರು. ಸಂದೀಪ್ ಅವರು ಇಬ್ಬರು ಮಹಿಳೆಯರನ್ನು ಪ್ರೀತಿಸುತ್ತಿದ್ದು, ತನ್ನ ಮೊದಲ ಸಂಗಾತಿ ಕುಸುಮ್ ಅವರೊಂದಿಗೆ ವಾಸಿಸುತ್ತಿದ್ದಾರೆ ಮತ್ತು ಅವರೊಂದಿಗೆ ಮಗುವನ್ನು ಹೊಂದಿದ್ದರು. ಸ್ವಾತಿ ಕುಮಾರಿ ಎಂಬ ಇನ್ನೊಬ್ಬ ಮಹಿಳೆಯೊಂದಿಗಿನ ಅವನ ಸಂಬಂಧವು ಬಹಿರಂಗವಾದ ನಂತರ, ಅವನು ಎರಡೂ ಮಹಿಳೆಯರನ್ನು ಮದುವೆಯಾಗಬೇಕೆಂದು ನಿರ್ಧರಿಸಿದ ಪಂಚಾಯತ್ ಅನ್ನು ಕರೆಯಲಾಯಿತು. ನಂತರ ಇಬ್ಬರನ್ನು ಮದುವೆಯಾಗಿದ್ದನು. ಇಂತಹ ನಿದರ್ಶನಗಳು ಸಾಂಪ್ರದಾಯಿಕ ರೂಢಿ, ಸಂಪ್ರದಾಯಗಳಿಗೆ ಸವಾಲು ಆಗುತ್ತೆವೆ.

    ಅಪ್ಪ ಯಾರೆಂಬ ಪ್ರಶ್ನೆಗೆ ಖಡಕ್​ ಉತ್ತರ ಕೊಟ್ಟ ವಿನೋದ್​ ರಾಜ್​; ಲೀಲಾವತಿ ಕುರಿತು ಸಮಾಧಿಯಾಗಿದ್ದ ಸತ್ಯ ಬಹಿರಂಗ

    ​ಮದುವೆ ಆಗಿದ್ಯಾ? ಹೆಂಡ್ತಿ ಯಾರು? ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಕೊಟ್ಟೆ ಬಿಟ್ರು ವಿನೋದ್ ರಾಜ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts