ಪಾರ್ಕಿಂಗ್​ ವಿಚಾರವಾಗಿ ಜಗಳವಾಗಿ ಮಾರಣಾಂತಿಕ ಹಲ್ಲೆ; ವಧು ಮಂಟಪದಲ್ಲಿ, ವರ ಆಸ್ಪತ್ರೆಯಲ್ಲಿ

Stone Pelting
Published on

ಲಖನೌ: ಮೈಸೂರಿನ ಉದಯಗಿರಿ ಪೊಲೀಸ್​ ಠಾಣೆ ಮೇಲೆ ನಡೆದಿದ್ದ ಕಲ್ಲು ತೂರಾಟ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಘಟನೆಯೊಂದು ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದ್ದು, ಈ ಪ್ರಕರಣ ಸದ್ಯ ಸದ್ದು ಮಾಡುತ್ತಿದೆ.

ಪಾರ್ಕಿಂಗ್ ವಿಚಾರವಾಗಿ ನಡೆದ ಘರ್ಷಣೆಯಲ್ಲಿ ಅನ್ಯಧರ್ಮದ ಗುಂಪೊಂದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಸದ್ಯ ಕಾನೂನು ಸುವ್ಯವಸ್ಥೆ ಕುರಿತು ಪ್ರಶ್ನೆಗಳು ಉದ್ಭವಿಸಿದೆ.

ನಡೆದಿದ್ದಿಷ್ಟು? 

ಘಟನೆ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿ ನಿತಿನ್ ಕುಮಾರ್, ವರನೋರ್ವ ಸಲೂನ್​ನಿಂದ ಹಿಂತಿರುಗಿದಾಗ ಪಾರ್ಕಿಂಗ್ ವಿಚಾರವಾಗಿ ಅನ್ಯಧರ್ಮೀಯ ಗುಂಪೊಂದು ಗಲಾಟೆ ಶುರು ಮಾಡಿದೆ. ಬಳಿಕ ವರ ಹಾಗೂ ಆತನ ಜತೆಗಿದ್ದವರು ಪೊಲೀಸರಿಗೆ ಕರೆ ಮಾಡುತ್ತಿದ್ದಂತೆ ಆರೋಪಿಗಳು ಹಲ್ಲೆ ಮಾಡಿದ್ದು, ವಿಚಾರಿಸಲು ಸ್ಥಳಕ್ಕೆ ಹೋದ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಬರೇಲಿಯ ಅಯೋನ್ಲಾದ ಸ್ಟೇಟ್ ಬ್ಯಾಂಕ್ ಈ ಘಟನೆ ನಡದಿದ್ದು, ವರ ಮುಕುಲ್ ಗುಪ್ತಾ ಕಾರು ಹಾಗೂ ಬೈಕ್ ತೆಗೆಯುವ ವಿಚಾರವಾಗಿ ಗಲಾಟೆ ಶುರುವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದು, ಗಾಳಿಯಲ್ಲಿ ಗುಂಡು ಹಾರಿಸಿರುವುದು ಬೆಳಕಿಗೆ ಬಂದಿದೆ. ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿರುವ ವರನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಗಳನ್ನು ಹುಡುಕಲು ವಿಶೇಷ ತಂಡ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net