

ತರೀಕೆರೆ: ವಿವಿಧ ಬ್ಯಾಂಕ್ ಖಾತೆಗಳಲ್ಲಿ ಜಮೆಯಾಗಿರುವ ಗೃಹಲಕ್ಷ್ಮೀ ಯೋಜನೆ ನಗದು ಹಣ ಬಿಡಿಸಲು ಮಹಿಳೆಯರು ಪರದಾಡುವಂತಾಗಿದೆ.
ಐಬಿಡಿಬಿ, ಬ್ಯಾಂಕ್ ಆ್ ಬರೋಡಾ, ಕರ್ನಾಟಕ ಕಾವೇರಿ ಗ್ರಾಮೀಣ ಬ್ಯಾಂಕ್ ಸೇರಿ ಬಹುತೇಕ ಬ್ಯಾಂಕ್‌ಗಳಿಗೆ ಅಗಮಿಸುತ್ತಿರುವ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಮಹಿಳೆಯರು ಗೃಹಲಕ್ಷ್ಮೀ ಯೋಜನೆಗೆ 2 ಸಾವಿರ ಹಣ ಬಿಡಿಸಲು ನಾ ಮುಂದು ತಾ ಮುಂದು ಎಂದು ನೂಕು ನುಗ್ಗುಲು ಆರಂಭಿಸಿದ್ದಾರೆ. ಇದರಿಂದ ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಸಿಬ್ಬಂದಿ ಹೈರಾಣಾಗಿದ್ದಾರೆ. ಅದಲ್ಲದೇ ಠೇವಣಿ ಇಡಲು ಹಾಗೂ ಇತರೆ ಬ್ಯಾಂಕ್ ಕೆಲಸಕ್ಕಾಗಿ ಬ್ಯಾಂಕ್‌ಗೆ ಆಗಮಿಸುತ್ತಿರುವ ಗ್ರಾಹಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ಗೃಹಲಕ್ಷ್ಮೀ ಯೋಜನೆಯಿಂದ ಫಲಾನುಭವಿ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿರುವ ಹಣವನ್ನು ಬಿಡಿಸಿಕೊಳ್ಳದಿದ್ದರೆ ವಾಪಾಸ್ ಹೋಗುತ್ತದೆ ಎನ್ನುವ ವಂದತಿಯಿಂದ ಮಹಿಳೆಯರು ಬ್ಯಾಂಕ್ ಖಾತೆಗಳಿಗೆ ಜಮೆಯಾಗಿರುವ ಹಣ ಬಿಡಿಸಿಕೊಳ್ಳಲು ಬ್ಯಾಂಕ್‌ಗಳಿಗೆ ಮುಗಿಬಿದ್ದಿದ್ದಾರೆ.