ಎನ್‌ಎಂಪಿಎಗೆ ಗ್ರೀನ್‌ಟೆಕ್ ಗ್ಲೋಬಲ್ ಎನ್ವಿರಾನ್ಮೆಂಟ್ ಪ್ರಶಸ್ತಿ

mng_18 jun NMPA
ಪರಿಸರ ರಕ್ಷಣೆ ಹಾಗೂ ಪರಿಸರ ಅಭಿವೃದ್ದಿ ಯೋಜನೆಗೆ ಕೊಡುಗೆ ನೀಡಿದ ಗಮನಾರ್ಗ ಸಾಧನೆಗಾ ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ ಗ್ರೀನ್‌ಟೆಕ್ ಗ್ಲೋಬಲ್ ಎನ್ವಿರಾನ್ಮೆಂಟ್ ಅವಾರ್ಡ್ ಪ್ರಶಸ್ತಿ ಲಭಿಸಿದೆ.
Published on

ಮಂಗಳೂರು: ಪರಿಸರ ರಕ್ಷಣೆ ಹಾಗೂ ಪರಿಸರ ಅಭಿವೃದ್ದಿ ಯೋಜನೆಗೆ ಕೊಡುಗೆ ನೀಡಿದ ಗಮನಾರ್ಗ ಸಾಧನೆಗಾ ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ ಗ್ರೀನ್‌ಟೆಕ್ ಗ್ಲೋಬಲ್ ಎನ್ವಿರಾನ್ಮೆಂಟ್ ಅವಾರ್ಡ್ ಪ್ರಶಸ್ತಿ ಲಭಿಸಿದೆ.

ನವ ಮಂಗಳೂರು ಬಂದರು ಪ್ರಾಧಿಕಾರವು ಪರಿಸರ ಸಂರಕ್ಷಣಾ ವಿಭಾಗದ ಅಡಿಯಲ್ಲಿ ಪ್ರತಿಷ್ಠಿತ ಗ್ರೀನ್‌ಟೆಕ್ 24ನೇ ಜಾಗತಿಕ ಪರಿಸರ ಪ್ರಶಸ್ತಿ-2025 ಅನ್ನು 8ನೇ ಬಾರಿ ಪಡೆದುಕೊಂಡಿರುವುದು ವಿಶೇಷ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ 24ನೇ ಗ್ರೀನ್‌ಟೆಕ್ ಪರಿಸರ ಮತ್ತು ಸುಸ್ಥಿರತೆಯ ಶೃಂಗಸಭೆ ಮತ್ತು ಪ್ರಶಸ್ತಿಗಳಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಎಂಟನೇ ಬಾರಿಗೆ ಎನ್‌ಎಂಪಿಎಯನ್ನು ಗ್ರೀನ್‌ಟೆಕ್ ಫೌಂಡೇಶನ್‌ನಿಂದ ಗೌರವಿಸಿರುವುದಕ್ಕೆ ಎನ್‌ಎಂಪಿಎ ಅಧ್ಯಕ್ಷ ಡಾ.ಎ.ವಿ.ರಮಣ ಅವರು ಹರ್ಷ ವ್ಯಕ್ತಪಡಿಸಿದ್ದು, ಎನ್‌ಎಂಪಿಎ ಪರಿಸರ ಸಂಭಂದಿಸಿದ ಕಾರ್ಯಕ್ರಮ ಹಾಗೂ ಉತ್ತೇಜನಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಪರಿಸರ ಸ್ನೇಹಿಯಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ. ಪರಿಸರ ಕಾರ್ಯಕ್ರಮಗಳ ಕಾರ್ಯದಕ್ಷತೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿರುವುದರಿಂದ ಹಾಗೂ ಎನ್‌ಎಂಪಿಎಯ ಕಾರ್ಯವೈಖರಿಯನ್ನು ಗುರುತಿಸುವಂತೆ ಮಾಡಿದ ಎಲ್ಲರಿಗೂ ಈ ಪ್ರಶಸ್ತಿಯ ಶ್ರೇಯಸ್ಸು ಲಭಿಸಲಿದೆ. ಎನ್‌ಎಂಪಿಎ ಪರಿಸರವನ್ನು ಕಾಪಾಡಲು ಮತ್ತು ಅದರ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ವ್ಯಾಪಕ ಶ್ರೇಣಿಯ ಉಪಕ್ರಮಗಳನ್ನು ಜಾರಿಗೆ ತಂದಿದೆ. ಈ ಪ್ರಶಸ್ತಿ ಪಡೆದಿರುವುದಕ್ಕೆ ಎನ್‌ಎಂಪಿಎ ಹೆಮ್ಮೆ ಪಡುತ್ತದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net