ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಮಾನವ ಪ್ರಕೃತಿಯ ಕೂಸು. ಪ್ರಕೃತಿ ಮಾತೆಯನ್ನು ಕಾಪಾಡುವ ಹೊಣೆ ಎಲ್ಲರದು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಕಟಪಾಡಿ ನವೋದಯ ಫ್ರೆಂಡ್ಸ್ ಸಂಘ, ದುರ್ಗಾ ಫ್ರೆಂಡ್ಸ್ ವತಿಯಿಂದ ಕಟಪಾಡಿಯಲ್ಲಿ ‘ಉಸಿರಿಗಾಗಿ ಹಸಿರು’ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ತಹಸೀಲ್ದಾರ್ ಪ್ರತಿಭಾ ಆರ್., ಕಟಪಾಡಿ ಗ್ರಾಪಂ ಅಧ್ಯಕ್ಷೆ ಪ್ರಭಾ ಶೆಟ್ಟಿ, ಸದಸ್ಯರು ಭಾಗವಹಿಸಿದ್ದರು.
‘ಉಸಿರಿಗಾಗಿ ಹಸಿರು’ ಕಾರ್ಯಕ್ರಮ ಕಾಪು ತಾಲೂಕಿನಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ತಹಸೀಲ್ದಾರ್ ಪ್ರತಿಭಾ ಆರ್. ಮಾರ್ಗದರ್ಶನದಲ್ಲಿ ಕಾಪು ತಾಲೂಕಿನೆಲ್ಲೆಡೆ ಗಿಡ ಬೆಳೆಸುವ ಕಾಯಕಕ್ಕೆ ಶನಿವಾರ ಚಾಲನೆ ನೀಡಲಾಗಿದೆ. ಸಂತೋಷ್ ಶೆಟ್ಟಿಗಾರ್ ಅವರ ಪರಿಸರ ಕಾಳಜಿಯಿಂದ ಈ ಅಭಿಯಾನಕ್ಕೆ ಚಾಲನೆ ಸಿಕ್ಕಿದ್ದು, ಅದರಂತೆ ಶನಿವಾರ ಪಾಂಗಳ ಗುಡ್ಡೆ ಚರ್ಚ್ ರೋಡ್ ಹಿರಿಯ ನಾಗರಿಕರ ಆಸರೆಯಲ್ಲಿ ಗಿಡ ನೆಡಲಾಯಿತು. ಸಾರ್ವಜನಿಕರಿಗೆ ಗಿಡಗಳನ್ನು ಹಂಚಲಾಯಿತು.
ಮುಂದಿನ ಪೀಳಿಗೆಗೆ ಭೂಮಿಯನ್ನು ಸುರಕ್ಷಿತವಾಗಿ ಒಪ್ಪಿಸಬೇಕಾದರೆ ಇಂದು ನಾವು ಮರಗಿಡಗಳನ್ನು ನೆಡಬೇಕಾಗುತ್ತದೆ. ಹಸಿರನ್ನು ಕಾಪಾಡಬೇಕಾಗುತ್ತದೆ. ಭೂಮಿಯ ತಾಪಮಾನ ಏರುತ್ತಿದೆ. ಇದಕ್ಕೆ ಕಾರಣ ಪ್ರಕೃತಿಯ ಹನನ, ಆದ್ದರಿಂದ ಪ್ರಕೃತಿಯನ್ನು ತಂಪುಗೊಳಿಸಲು ಕಾಡನ್ನು ಬೆಳೆಸೋಣ, ಎಲ್ಲರೂ ನಿರಂತರ ಅಭಿಯಾನಕ್ಕೆ ಕೈ ಜೋಡಿಸಿ.
-ಪ್ರತಿಭಾ ಆರ್. ತಹಸೀಲ್ದಾರ್