More

    ಮಹಾ ಸಚಿವ ರಾಜೇಂದ್ರ ಪಾಟೀಲ (ಯಡ್ರಾವಕರ) ಅವರನ್ನು ವಾಪಸ್ ಅಟ್ಟಿದ ಖಾಕಿ

    ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಳಗಾವಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಎಂಇಎಸ್ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಮಹಾರಾಷ್ಟ್ರದ ಸಚಿವ ರಾಜೇಂದ್ರ ಪಾಟೀಲ (ಯಡ್ರಾವಕರ) ಅವರನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದು ರಾಜ್ಯದ ಗಡಿ ದಾಟಿಸಿ ಮಹಾರಾಷ್ಟ್ರಕ್ಕೆ ಬಿಟ್ಟು ಬಂದಿದ್ದಾರೆ.

    ಹುತಾತ್ಮ ದಿನಾಚರಣೆಗೆ ಎಂಇಎಸ್ ಸಿದ್ಧತೆ ನಡೆಸುತ್ತಿದ್ದಂತೆಯೇ ತೀವ್ರ ಕಟ್ಟೆಚ್ಚರ ವಹಿಸಿದ್ದ ಪೊಲೀಸರು, ಮಹಾರಾಷ್ಟ್ರ ನಾಯಕರು ಬೆಳಗಾವಿ ನಗರ ಪ್ರವೇಶಿಸುವುದನ್ನು ನಿರ್ಬಂಧಿಸಿ ಕೊಗನೊಳ್ಳಿ ಚೆಕ್ ಪೋಸ್ಟ್ ಹಾಗೂ ಸುತಗಟ್ಟಿ ಬಳಿ ವಾಹನ ತಪಾಸಣೆ ನಡೆಸಿದ್ದರು. ಆದರೂ, ಪೊಲೀಸರ ಕಣ್ಣು ತಪ್ಪಿಸಿ ಸಾರಿಗೆ ಬಸ್‌ನಲ್ಲಿ ಅವರು ನಗರ ಪ್ರವೇಶಿಸಿದ್ದರು ಎನ್ನಲಾಗಿದೆ.

    ಶುಕ್ರವಾರ ಬೆಳಗ್ಗೆ 11ರ ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹುತಾತ್ಮ ವೃತ್ತಕ್ಕೆ ಆಗಮಿಸುತ್ತಿದ್ದಂತೆಯೇ ಮಹಾರಾಷ್ಟ್ರದ ಸಚಿವನನ್ನು ಬೆಳಗಾವಿಯ ಖಡೇಬಜಾರ್ ಠಾಣೆ ಪೊಲೀಸರು ವಶಕ್ಕೆ ಪಡೆದರು. ಇದಕ್ಕೆ ಎಂಇಎಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರಾದರೂ ಪೊಲೀಸರು ಯಾವುದಕ್ಕೂ ಆಸ್ಪದ ನೀಡದೆ ಬೆಳಗಾವಿ ಗಡಿ ದಾಟಿಸಿ ಬಿಟ್ಟು ಬಂದಿದ್ದಾರೆ. ನಂತರ ನಡೆದ ಹುತಾತ್ಮ ದಿನಾಚರಣೆಯಲ್ಲಿ ಎಂಇಎಸ್‌ನ ಎರಡೂ ಬಣಗಳ ನಾಯಕರಾದ ಕಿರಣ ಠಾಕೂರ, ದೀಪಕ ದಳವಿ, ಮಾಲೋಜಿರಾವ ಅಷ್ಟೇಕರ ಸೇರಿ ಇತರ ನಾಯಕರು ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದರು.

    ಪೊಲೀಸರ ನಿಗಾ: ಗಡಿ ವಿವಾದ ಸುಪ್ರೀಂ ಕೋರ್ಟ್ ತೀರ್ಪಿನಿಂದ ಇತ್ಯರ್ಥವಾಗುವುದು ವಿಳಂಬವಾಗಲಿದೆ. ಈಗಾಗಲೇ 64 ವರ್ಷ ಕಳೆದಿವೆ. ಸುಪ್ರೀಂ ಕೋರ್ಟ್‌ನ ನೆಪ ಹೇಳಿ ಇನ್ನೆಷ್ಟು ವರ್ಷ ಕಳೆಯುವುದು? ಅಲ್ಲಿವರೆಗೆ ಬೆಳಗಾವಿಯನ್ನು ಕೇಂದ್ರಾಡಳಿ ಪ್ರದೇಶವನ್ನಾಗಿಸಲಿ. ಆಗ ಕರ್ನಾಟಕ ಪೊಲೀಸ್ ಆಟ ನಡೆಯುವುದಿಲ್ಲ ಎಂದಿದ್ದಾರೆ. ದಿನಕ್ಕೊಂದು ಇಂಥ ಪ್ರಚೋದನಕಾರಿ ಹೇಳಿಕೆಗಳಿಂದ ಗಡಿಭಾಗದಲ್ಲಿ ಶಾಂತಿ ಕದಡುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಪೊಲೀಸರು ಮಹಾರಾಷ್ಟ್ರ ನಾಯಕರ ಚಲನ-ವಲನಗಳ ಮೇಲೆ ನಿಗಾ ಇಟ್ಟಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts