ವಿಜ್ಞಾನ ಪ್ರಯೋಗಗಳನ್ನು ನೋಡಿ ಆನಂದಿಸಿದ ಮಕ್ಕಳು

GRAVITY SCIENCE FOUNDATION
Published on

ಮೈಸೂರು: ಗ್ರಾೃವಿಟಿ ಸೈನ್ಸ್ ಫೌಂಡೇಷನ್ ಸಂಸ್ಥೆ ವತಿಯಿಂದ ಮಂಗಳವಾರ ಆಲನಹಳ್ಳಿಯ ವಿಜ್ಞಾನ ಸಂಪನ್ಮೂಲ ಕೇಂದ್ರದಲ್ಲಿ ‘ಸ್ಟೀಮ್’ ಶೀರ್ಷಿಕೆಯಡಿ ಮಕ್ಕಳಿಗೆ ವಿಜ್ಞಾನ ಕಾರ್ಯಾಗಾರ ನೆರವೇರಿತು.

ನಗರದ ವಿವಿಧ ಭಾಗಗಳಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿ ಅನೇಕ ವಿಜ್ಞಾನದ ಕುತೂಹಲ ಸಂಗತಿಗಳನ್ನು ಪ್ರಯೋಗಗಳನ್ನು ಮಾಡಿ ನೋಡಿ ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸಿ ಆನಂದಿಸಿದರು.

ಕಾರ್ಯಗಾರದಲ್ಲಿ ಏರೋ ಮಾಡಲಿಂಗ್ ಶೋ, ವಾಟರ್ ರಾಕೆಟ್ ಲಾಂಚಿಂಗ್, ಹ್ಯಾಮ್ ರೇಡಿಯೋ ಪ್ರಾತ್ಯಕ್ಷಿಕೆ, ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆಗಳನ್ನು ಮಕ್ಕಳು ಕಲಿತರು. ವಿಜ್ಞಾನ ಪ್ರಯೋಗಗಳ ವಿವರಣೆ, ಆಕಾಶ ವೀಕ್ಷಣೆ, ವಿಜ್ಞಾನ ಮಾದರಿಗಳ ಪ್ರದರ್ಶನ, ಮಾನವನ ದೇಹದ ಅಂಗಗಳ ಬಗೆಗಿನ ಪ್ರದರ್ಶನಗಳನ್ನು ಒಳಗೊಂಡಂತೆ ಅನೇಕ ಚಟುವಟಿಕೆ ನೆರವೇರಿದವು. ವಿಜ್ಞಾನ, ತಂತ್ರಜ್ಞಾನ, ಕಲೆ ಹಾಗೂ ಗಣಿತಕ್ಕೆ ಸಂಬಂಧಪಟ್ಟಂತಹ ಅನೇಕ ವಿಷಯಗಳನ್ನು ತಿಳಿಸಲಾಯಿತು.

ಫೌಂಡೇಷನ್‌ನ ಸಂಸ್ಥಾಪಕ ಹಾಗೂ ಕಾರ್ಯದರ್ಶಿ ಎ.ಎಸ್.ಅಭಿಷೇಕ್, ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಸಂಸ್ಥೆಯ ಎಮಿಲ್ ಪಾಲ್, ಎಂ.ಬಿ.ಮಹೇಶ್, ಎಸ್.ಹರ್ಷ, ಗಾಯತ್ರಿ, ಕೃಷ್ಣಮೂರ್ತಿ, ಖ್ಯಾತ ವೈದ್ಯ ಡಾ. ಎನ್. ಎಂ. ಶಾಮಸುಂದರ್ ಇತರರು ಭಾಗವಹಿಸಿದ್ದರು. ಸಂಸ್ಥೆ ಅಧ್ಯಕ್ಷ ಎಸ್. ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net