ಅಂಡರ್​ 21 ಸ್ನೂಕರ್ ವಿಶ್ವ ಚಾಂಪಿಯನ್​ ಶಿಪ್​ ಟೂರ್ನಿಯಲ್ಲಿ ಚಿನ್ನ ಗೆದ್ದ ಕೋಲಾರದ ಯುವತಿಗೆ ಅದ್ಧೂರಿ ಸನ್ಮಾನ

Keerthana Pandian,
Published on

ಕೋಲಾರ: ಸೌದಿ ಅರೇಬಿಯಾದಲ್ಲಿ ನಡೆದ ಸ್ನೂಕರ್ ವಿಶ್ವ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿರುವ ಕೋಲಾರ ಮೂಲದ ಕೀರ್ತನಾ ಪಾಂಡಿಯನ್​ರನ್ನು ಅದ್ಧೂರಿಯಾಗಿ ಸನ್ಮಾಯಿಸಲಾಯಿತು.

ಸ್ನೂಕರ್​ ಟೂರ್ನಿಯ ಅಂಡರ್ 16ನಲ್ಲಿ ಬೆಳ್ಳಿ, ಅಂಡರ್ 18 ನಲ್ಲಿ ಕಂಚು ಗೆದ್ದಿದ್ದ ಕೀರ್ತನಾ ಇದೀಗ ಅಂಡರ್ 21ನಲ್ಲಿ ಚಿನ್ನಕ್ಕೆ ಮುತ್ತಿಟ್ಟು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕೋಲಾರಕ್ಕೆ ಆಗಮಿಸಿರುವ ಕೀರ್ತನಾರನ್ನ ಅವರ ಕಾಲೇಜಿನಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಗಿದೆ.

ಕೆಜಿಎಫ್​ನ ಬೆಮಲ್‌ನಗರದ ನಿವಾಸಿ ಪಾಂಡಿಯನ್-ಜಯಲಕ್ಷ್ಮಿ ದಂಪತಿ ಪುತ್ರಿಯಾದ ಕೀರ್ತನಾ ಕೆಜಿಎಫ್​ನ ಜೈನ್ಸ್ ಕಾಲೇಜು ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿದ್ದಾರೆ.

ಕಳೆದ ಜುಲೈ ತಿಂಗಳಲ್ಲಿ ಸೌದಿಅರೇಬಿಯಾ ದೇಶದಲ್ಲಿ ನಡೆದ ಸ್ನೂಕರ್ ಕ್ರೀಡೆಯಲ್ಲಿ ಚಾಂಪಿಯನ್ ಆಗುವ ಮೂಲಕ, ತನ್ನ ಕಾಲೇಜುಗೆ, ಜಿಲ್ಲೆಗೆ ಮತ್ತು ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಈ ಹಿನ್ನಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕೀರ್ತನರನ್ನು ಮೆರವಣಿಗೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ನಂತರ ಕಾಲೇಜಿನಲ್ಲಿ ಸನ್ಮಾನ ಮಾಡುವ ಮೂಲಕ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net