ನಿವೃತ್ತ ಯೋಧ ಕೃಷ್ಣ ತುಂಬಗಿಗೆ ಅದ್ಧೂರಿ ಸ್ವಾಗತ

Grand welcome for retired soldier Krishna Tumbagi
ಅಮೀನಗಡದಲ್ಲಿ ನಿವೃತ್ತ ಸುಬೇದಾರ ಕೃಷ್ಣ ತುಂಬಗಿ ಅವರನ್ನು ಅವರ ಬಂಧುಗಳಿಂದ ಸ್ವಾಗತಿಸಿ ಸನ್ಮಾನಿಸಿದರು.
Published on

ಬಾದಾಮಿ: ದೇಶಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟು ಭಾರತೀಯ ಸೇನೆಯಲ್ಲಿ 30 ವರ್ಷಗಳ ಕಾಲ ಲಖನೌ, ಆಸ್ಸಾಂ, ಜಮ್ಮು ಕಾಶ್ಮೀರ, ಚಂಡಿಗಡ್‌ಗಳಲ್ಲಿ ಸೇವೆಸಲ್ಲಿಸಿ ಭಾರತ ಮಾತೆಯ ರಕ್ಷಣೆ ಮಾಡಿ, ನಿವೃತ್ತಿಹೊಂದಿ ತನ್ನ ಹುಟ್ಟೂರು ಅಮೀನಗಡಕ್ಕೆ ಮಂಗಳವಾರ ಆಗಮಿಸಿದ ನಿವೃತ್ತ ಯೋಧ ಸುಬೇದಾರ ಕೃಷ್ಣ ಶಂಕ್ರಪ್ಪ ತುಂಬಗಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಪಟ್ಟಣದ ಗಣೇಶ ದೇವಸ್ಥಾನದಿಂದ ನಿವೃತ್ತ ಯೋಧ ಕೃಷ್ಣ ತುಂಬಗಿ ಹಾಗೂ ಅವರ ಪತ್ನಿ ಜಯಶ್ರೀ ಅವರನ್ನು ತ್ರೀವರ್ಣಧ್ವಜ ಹಿಡಿದು, ಭಾರತ್ ಮಾತಾಕಿ ಜೈ ಎಂದು ಘೋಷಣೆಕೂಗಿ ಅದ್ದೂರಿಯಾಗಿ ಸ್ವಾಗತಿಸಿದರು, ಮನೆಗೆ ಬಂದ ಯೋಧನಿಗೆ ಆರತಿ ಬೆಳಗಿ ಸ್ವಾಗತಿಸಲಾಯಿತು. ಬಳಿಕ ಗುಳೇದಗುಡ್ಡ ಪಟ್ಟಣದ ಯಂಡಿಗೇರಿ ಬಂಧುಗಳಿಂದ ಯೋಧನನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಗ್ನಿವೀರ ಕೃಷ್ಣ ಯಂಡಿಗೇರಿ, ಹುಚ್ಚೇಶ ರಾ. ಯಂಡಿಗೇರಿ, ಮಹಾಕೂಟ ಯಂಡಿಗೇರಿ, ಹುಚ್ಚೇಶ ಮ. ಯಂಡಿಗೇರಿ, ರೂಪಾ ಯಂಡಿಗೇರಿ, ಗೀತಾ ಯಂಡಿಗೇರಿ, ಸಂಗೀತಾ ಯಂಡಿಗೇರಿ, ಸಾವಿತ್ರಿ ಯಂಡಿಗೇರಿ, ಮಲ್ಲಿಕಾರ್ಜುನ ಬಾಚಿನಹಳ್ಳಿ, ಶಶಿ ಹಳಪೇಟಿ, ಅಸ್ಲಂ ಬಿಂಜಾರ, ಬಸವರಾಜ ಜನಿವಾರದ, ಮುತ್ತಣ್ಣ ಹಳ್ಳೂರ, ಚನ್ನು ಚಿಂಚಗಂಡಿ, ಬಸವರಾಜ ಬಲಭಾವಿ, ಜಗದೀಶ ಸುನದಾಳಿ, ಗೌರವ್ವ ಹಟ್ಟಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net