

ಬೆಂಗಳೂರು: ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಮಾರ್ಗಸೂಚಿ ಪ್ರಕಟವಾಗಿದ್ದು, ಪಂಚಾಯಿತಿಯ ಚುಕ್ಕಾಣಿ ಹಿಡಿಯಲು ಆಕಾಂಕ್ಷಿತರು ರಾಜಕೀಯ ನಾಯಕರ ಮತ್ತು ಗ್ರಾಪಂ ನೂತನ ಸದಸ್ಯರ ಮನವೊಲಿಕೆಯಲ್ಲಿ ಬಿಜಿಯಾಗಿದ್ದಾರೆ.
ಕಳೆದ ಡಿಸೆಂಬರ್ 22 ಮತ್ತು 27ರಂದು ರಾಜ್ಯಾದ್ಯಂತ ಎರಡು ಹಂತದಲ್ಲಿ ಗ್ರಾಪಂ ಚುನಾವಣೆ ನಡೆದಿತ್ತು. ಡಿ.30ರಂದು ಫಲಿತಾಂಶ ಪ್ರಕಟವಾಗಿದೆ. ಇಂದು (ಶನಿವಾರ) ರಾಜ್ಯದ 5,956 ಗ್ರಾಮ ಪಂಚಾಯಿತಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಜಿಲ್ಲಾವಾರು ಮೀಸಲಾತಿ ಮಾರ್ಗಸೂಚಿ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ. ಇದನ್ನೂ ಓದಿರಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರಾವಧಿ 5 ವರ್ಷವಲ್ಲ! ಮತ್ತೆಷ್ಟು ಗೊತ್ತಾ?
30 ತಿಂಗಳ ಅಧಿಕಾರಾವಧಿಗೆ ಅಧ್ಯಕ್ಷ-ಉಪಾಧ್ಯಕ್ಷರು ಆಯ್ಕೆಯಾಗಲಿದ್ದು, ಆಯಾ ಪಂಚಾಯಿತಿಯಲ್ಲಿ ಚುನಾಯಿತ ಸದಸ್ಯರಿಂದ ಸಮಾನ ಮತ ಪಡೆದ ಅಭ್ಯರ್ಥಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಮಾಡುವ ಅಧಿಕಾರವನ್ನ ಆಯಾ ಜಿಲ್ಲಾಧಿಕಾರಿಗೆ ಸರ್ಕಾರ ನೀಡಿದೆ. ಕೆಳಗಿನ ಮಾರ್ಗಸೂಚಿಯಂತೆ ಆಯಾ ಜಿಲ್ಲಾವಾರು ಮೀಸಲಾತಿ ಪ್ರಕಟಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.