ಒಂದು ಮತದಿಂದ ಗೆಲುವು ಸಾಧಿಸಿದ ರೇಣುಕಾ: ಗೊರವನಹಳ್ಳಿ ಗ್ರಾಪಂಗೆ ಅಧ್ಯಕ್ಷರಾಗಿ ಆಯ್ಕೆ

Gp
Published on

ಮದ್ದೂರು: ತಾಲೂಕಿನ ಗೊರವನಹಳ್ಳಿ ಗ್ರಾಮ ಪಂಚಾಯಿತಿಗೆ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ರೇಣುಕಾ ಚುನಾಯಿತರಾದರು.

ಅಧ್ಯಕ್ಷರಾಗಿದ್ದ ಮಧುಕುಮಾರ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅಧ್ಯಕ್ಷರ ಚುನಾವಣೆಗೆ ಶಂಕರೇಗೌಡ, ರಾಮಲಿಂಗಯ್ಯ, ಉಮೇಶ್ ಹಾಗೂ ರೇಣುಕಾ ನಾಮಪತ್ರ ಸಲ್ಲಿಸಿದ್ದರು. ಶಂಕರೇಗೌಡ ಹಾಗೂ ರಾಮಲಿಂಗಯ್ಯ ನಾಮಪತ್ರವನ್ನು ಹಿಂಪಡೆದು, ಅಂತಿಮವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ರೇಣುಕಾ, ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಉಮೇಶ್ ಕಣದಲ್ಲಿ ಉಳಿದಿದ್ದರು. ನಂತರ ನಡೆದ ಚುನಾವಣೆಯಲ್ಲಿ ರೇಣುಕಾ 8 ಮತ ಹಾಗೂ ಉಮೇಶ್ 7 ಮತ ಪಡೆದರು. ರೇಣುಕಾ 1 ಮತಗಳ ಅಂತರದಿಂದ ಜಯಶೀಲರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net