Govt School : ಮದ್ಯ ಸೇವಿಸಿ ಸರ್ಕಾರಿ ಶಾಲೆಯಲ್ಲಿ ಬಾರ್ ಡ್ಯಾನ್ಸರ್​ಗಳ ಜತೆ ಡ್ಯಾನ್ಸ್ ! ವಿಡಿಯೋ ನೋಡಿ

Bar Girls Dance
Published on

ಬಿಹಾರ: ಮದುವೆ ಸಮಾರಂಭದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಮದ್ಯ ಸೇವಿಸಿ  ಬಾರ್ ಡ್ಯಾನ್ಸರ್‌ಗಳೊಂದಿಗೆ ( Bar Girls Dance ) ಅಶ್ಲೀಲವಾಗಿ ನೃತ್ಯ ಮಾಡಿದರು. ಬಿಹಾರದ ಸಹರ್ಸಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ  (Govt School) ಮಂಗಳವಾರ ಸಂಜೆ ಈ ಆಘಾತಕಾರಿ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಹಾರದ ಸಹರ್ಸಾದ  ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮದುವೆ ಸಮಾರಂಭದ ಹಿನ್ನೆಲೆಯಲ್ಲಿ ಕೆಲವರು ಬ್ಯಾಂಡ್ ಮತ್ತು ನಾಲ್ವರು ಬಾರ್ ಡ್ಯಾನ್ಸರ್‌ಗಳನ್ನು ಕರೆತಂದಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಗೆ ತಂದು ಕುಡಿದು ಕುಣಿದಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಾಲ್ವರು ಮಹಿಳೆಯರು ಭೋಜ್‌ಪುರಿ ಹಾಡುಗಳಿಗೆ ಅಶ್ಲೀಲವಾಗಿ ನೃತ್ಯ ಮಾಡುತ್ತಿದ್ದಾರೆ. ವಿಡಿಯೋದಲ್ಲಿ ಕೆಲವರು ಮಹಿಳೆಯರ ಸುತ್ತ ಜಮಾಯಿಸಿ ಮದ್ಯ ಸೇವಿಸಿ ಅವರೊಂದಿಗೆ ಡ್ಯಾನ್ಸ್ ಮಾಡಿದ್ದಾರೆ.ಸೆಪ್ಟೆಂಬರ್ 24 ರ ರಾತ್ರಿ ನಡೆದ ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಆಕ್ರೋಶವನ್ನು ಕೆರಳಿಸಿತು.

ಮಕ್ಕಳಿಗೆ ಶಿಕ್ಷಣ ನೀಡಲು ಉದ್ದೇಶಿಸಿರುವ ಶಾಲಾ ಮೈದಾನದಲ್ಲಿ ಇಂತಹ ಅನೈತಿಕ ಚಟುವಟಿಕೆಗಳು ಹೇಗೆ ನಡೆಯುತ್ತಿವೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಶಾಲೆಯಲ್ಲಿ ಇಂತಹ ಆಚರಣೆಗೆ ಹೇಗೆ ಅವಕಾಶ ನೀಡಲಾಯಿತು ಎಂಬುದಕ್ಕೆ ಶಿಕ್ಷಣ ಇಲಾಖೆ ಉತ್ತರ ನೀಡುವಂತೆಯೂ ಕೇಳಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಯಾವುದೇ ಅನುಮತಿ ನೀಡಿಲ್ಲ. ಮದುವೆ  ಅಂಗವಾಗಿ ಕೆಲವರು ಶಾಲೆಯಲ್ಲಿ ಉಳಿದುಕೊಂಡು ಮೋಜಿಗಾಗಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net