

ವಾರಾಣಸಿ : ವಾರಾಣಾಸಿ : ಕಾಶಿ ಜ್ಞಾನ ಸಿಂಹಾಸನ ಪೀಠದ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ವಿದ್ಯಾರ್ಥಿ ಮಹಾರಾಷ್ಟ್ರದ ಬಾರ್ಶಿ ದಹಿವಡಕರ ಮಠದ ಶ್ರೀಗುರುಸಿದ್ದ ಮಣಿಕಂಠ ಶಿವಾಚಾರ್ಯ ಸ್ವಾಮಿಗಳು ವಾರಾಣಾಸಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ವಿಭಾಗದ ಶಕ್ತಿವಿಶಿಷ್ಟಾದ್ವೆತ ವೇದಾಂತ ಆಚಾರ್ಯ ಪರೀಕ್ಷೆಯಲ್ಲಿ 3 ಚಿನ್ನದ ಪದಕಗಳೊಂದಿಗೆ ಪ್ರಥಮ ರ‍್ಯಾಂಕ ಪಡೆದಿದ್ದು, ಬುಧವಾರ ಜರುಗಿದ 43ನೆಯ ಘಟಿಕೋತ್ಸವದಲ್ಲಿ ಉತ್ತರಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್ ಶ್ರೀಗಳಿಗೆ ಪ್ರಮಾಣ ಪತ್ರ ಹಾಗೂ ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.
ಈ ವೇಳೆ ಕೇಂದ್ರ ಸರಕಾರದ ಸಂಸ್ಕೃತಿ ಸಚಿವ ಗಜೇಂದ್ರಸಿಂಗ್ ಶೇಖಾವತ್, ರ‍್ಯಾಂಕ್ ವಿಜೇತ ಶ್ರೀಗಳ ಪೂರ್ವಾಶ್ರಮದ ಮಾತೋಶ್ರೀ ಸರಸ್ವತಿ ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಹಿಂದೆ ಕಾಶಿ ಮತ್ತು ಶ್ರೀಶೈಲ ಜಗದ್ಗುರುಗಳು ಇದೇ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಮೂರು ಚಿನ್ನದ ಪದಕಗಳೊಂದಿಗೆ ಮೊದಲ ರ‍್ಯಾಂಕ್ ಸಂಪಾದಿಸಿ ಕಾಶಿ ಪೀಠದ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲಕ್ಕೆ ವ್ಯಾಪಕ ಗೌರವವನ್ನು ತಂದಿರುವ ಶ್ರೀಗುರುಸಿದ್ದ ಮಣಿಕಂಠ ಶಿವಾಚಾರ್ಯ ಸ್ವಾಮಿಗಳನ್ನು ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಗೌರವಿಸಿ ಆಶೀರ್ವದಿಸಿದರು.