ಇನ್ನು ಮುಂದೆ ಶಾಲೆಗಳಲ್ಲಿ ಪ್ರತಿದಿನ 1 ಗಂಟೆ ದೇಶಭಕ್ತಿ ಕ್ಲಾಸ್​!

school
Published on

ನವದೆಹಲಿ: ನವೀನ ರೀತಿಯ ಯೋಜನೆಗಳಿಗೆ ಚಾಲನೆ ನೀಡುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಅಲ್​ ಅವರು ಭಾನುವಾರದಂದು ಮತ್ತೊಂದು ಮಹತ್ತರ ಯೋಜನೆಯನ್ನು ಘೋಷಿಸಿದ್ದಾರೆ. ಇನ್ನು ಮುಂದೆ ಪ್ರತಿ ಶಾಲೆಗಳಲ್ಲಿ ದಿನಕ್ಕೆ ಒಂದು ಗಂಟೆ ದೇಶಭಕ್ತಿ ತರಗತಿ ನಡೆಸುವುದಾಗಿ ಅವರು ತಿಳಿಸಿದ್ದಾರೆ.

ಪ್ರಸ್ತುತ ನಮ್ಮ ದೇಶದಲ್ಲಿ ದೇಶಭಕ್ತಿಯನ್ನು ಹೇಳಿಕೊಡಲಾಗುತ್ತಿಲ್ಲ. ಇನ್ನು ಮುಂದೆ ರಾಜ್ಯದ ಶಾಲೆಗಳಲ್ಲಿ ಅದನ್ನು ಹೇಳಿಕೊಡಲಾಗುವುದು. ಭಗತ್​ ಸಿಂಗ್​, ಬಿ.ಆರ್​.ಅಂಬೇಡ್ಕರ್​ ಸೇರಿ ಅನೇಕರ ಬೋಧನೆಗಳನ್ನು ಮಕ್ಕಳಿಗೆ ತಿಳಿಸಲಾಗುವುದು ಎಂದು ಅರವಿಂದ ಕೇಜ್ರಿವಾಲ್​ ಅವರು ಹೇಳಿದ್ದಾರೆ.

ಈ ಹಿಂದೆ ಅವರು ರಾಜ್ಯದ ಹಿರಿಯ ನಾಗರಿಕರನ್ನು ಉಚಿತವಾಗಿ ಅಯೋಧ್ಯಾ ಪ್ರವಾಸಕ್ಕೆ ಕಳುಹಿಸುವುದಾಗಿ ಹೇಳಿದ್ದರು. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net