More

    ಖಾಸಗಿ​ ವ್ಯವಹಾರದಲ್ಲಿ ತೊಡಗಿದ್ದ 8 ಶಿಕ್ಷಕರು ಸಸ್ಪೆಂಡ್!

    ಚಿತ್ರದುರ್ಗ: ಮೋದಿಕೇರ್ ವ್ಯವಹಾರದಲ್ಲಿ ತೊಡಗಿದ್ದ 8 ಜನ ಶಿಕ್ಷಕರ ಸಸ್ಪೆಂಡ್ ಆಗಿದ್ದಾರೆ. ಇವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯ ಶಿಕ್ಷಕರಾಗಿದ್ದು ಇವರನ್ನು ಅಮಾತುಗೊಳಿಸಿ ಚಿತ್ರದುರ್ಗದ ಡಿಡಿಪಿಐ ರವಿಶಂಕರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

    ಶಿಕ್ಷಕರಾದ ರವಿಕುಮಾರ್, ಶ್ರೀನಿವಾಸ್, ಸಿದ್ದಮ್ಮ, ಇಂದ್ರಾಣಿ, ಮಂಜುಳಾ ಸೇರಿ ಎಂಟು ಮಂದಿ ಶಿಕ್ಷಕರ ವಿರುದ್ಧ ಕೆ.ಮಲ್ಲಿಕಾರ್ಜುನ್ ಎಂಬುವವರು ದೂರು ನೀಡಿದ್ದರು. ಶಿಕ್ಷಣ ಇಲಾಖೆ ಆಯುಕ್ತರ ಸೂಚನೆ ಮೇರೆಗೆ 16 ಶಿಕ್ಷಕರ ವಿಚಾರಣೆ ನಡೆಸಲಾಗಿದೆ.

    ಶಿಕ್ಷಕರ ಚೈನ್ ಲಿಂಕ್ ಮೂಲಕ ಮೋದಿ ಕೇರ್ ವ್ಯವಹಾರ ನಡೆಸಿದ್ದು ವಿಚಾರಣೆಯಲ್ಲಿ ಸಾಬೀತಾಗಿದೆ. ದೂರು, ವಿಚಾರಣೆ ಆಧರಿಸಿ ಭಾಗಿಯಾಗಿದ್ದ 8ಜನ ಶಿಕ್ಷಕರು ಸಸ್ಪೆಂಡ್ ಮಾಡಲಾಗಿದೆ.

    ನಿಯಮದ ಪ್ರಕಾರ ಸರ್ಕಾರಿ ಶಿಕ್ಷಕರು ಅಧಿಕಾರ ವ್ಯಾಪ್ತಿಯ ಪ್ರದೇಶವನ್ನು ಬಿಟ್ಟು ಹೋಗುವುದು, ಖಾಸಗಿಯಾಗಿ ವಿದೇಶ ಪ್ರಯಾಣ ಮಾಡುವುದು, ವಂತಿಗೆ-ಉಡುಗೊರೆಗಳನ್ನು ಪಡೆಯುವುದು, ಖಾಸಗಿ ವ್ಯಾಪಾರ ನಡೆಸುವುದು, ಕಛೇರಿಯ ಕರ್ತವ್ಯದ ಆಚೆಗೆ ಖಾಸಗಿ ಕೆಲಸ ಮಾಡುವುದು, ಮುಂತಾದ ಕೆಲಸಗಳನ್ನು ಮಾಡಬಾರದು. ಈ ಶಿಕ್ಷಕರು ಸರ್ಕಾರಿ ವೃತ್ತಿಯಲ್ಲಿ ಇರುವಾಗಲೇ ಖಾಸಗಿಯಾಗಿ ವ್ಯಾಪಾರ-ಹೂಡಿಕೆಗಳಲ್ಲಿ ಇರುವುದರಿಂದ ಅವರನ್ನು ವಜಾ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts