More

    ಕಳ್ಳಬೇಟೆಗಾರರ ಗುಂಡಿಗೆ ಕಾಡುಕೋಣ ಬಲಿ


    ಮೈಸೂರು : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಳ್ಳಬೇಟೆಗಾರರ ಗುಂಡಿಗೆ ಕಾಡುಕೋಣ ಬಲಿಯಾಗಿದೆ.


    ಉದ್ಯಾನವನದ ಆನೆಚೌಕೂರು ವನ್ಯಜೀವಿ ವಲಯದ ಬಫರ್ ಪ್ರದೇಶಕ್ಕೆ ಸೇರಿರುವ ಚಪ್ಪಂಗಿ ಶಾಖೆಯ ದೇವಮಚ್ಚಿ ಮೀಸಲು ಅರಣ್ಯ ಪ್ರದೇಶದ ಅಣ್ಣಿಕೆರೆ ಗಸ್ತಿನ ಸಿದ್ದಪುರ ಪಿರಿಯಾಪಟ್ಟಣ ಮುಖ್ಯ ರಸ್ತೆಯಿಂದ ಪಾದರಕಟ್ಟೆ ಕಳ್ಳಬೇಟೆ ತಡೆ ಶಿಬಿರಕ್ಕೆ ಹೋಗುವ ಮಾರ್ಗದಲ್ಲಿ (ಮೈಸೂರು – ಕೊಡಗು ಚೈನ್‌ಗೇಟ್) ಭಾನುವಾರ ಮುಂಜಾನೆ 2 ಗಂಟೆ ಸಮಯದಲ್ಲಿ ಗಸ್ತು ತಿರುಗುವ ಸಿಬ್ಬಂದಿಗೆ ಗುಂಡು ಹಾರಿಸಿದ ಶಬ್ದ ಕೇಳಿ ಬಂತು. ಕೂಡಲೇ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದಾಗ ಯಾರೋ ದುಷ್ಕರ್ಮಿಗಳು ಗುಂಡು ಹಾರಿಸಿ 12 ವರ್ಷದ ಗಂಡು ಕಾಡುಕೋಣ(ಇಂಡಿಯನ್ ಗಾರ್)ವೊಂದನ್ನು ಹತ್ಯೆ ಮಾಡಿರುವುದು ಕಂಡುಬಂದಿದೆ.

    ಸ್ಥಳಕ್ಕೆ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ಡಿ.ಎಸ್.ದಯಾನಂದ್, ಪಶುವೈದ್ಯಾಧಿಕಾರಿ ಡಾ.ರಮೇಶ್, ವಲಯ ಅರಣ್ಯಾಧಿಕಾರಿ ಡಿ.ದೇವರಾಜ್ ಭೇಟಿ ನೀಡಿ ಪರಿಶೀಲಿಸಿದರು. ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts