More

    ಧೂಮಪಾನ ಮಾಡಿ 8 ಲಕ್ಷ ರೂ. ಕಳ್ಕೊಂಡ ಉದ್ಯೋಗಿ; 355 ಗಂಟೆ 19 ನಿಮಿಷಗಳ ಸ್ಮೋಕಿಂಗ್!

    ನವದೆಹಲಿ: ಧೂಮಪಾನ ಮಾಡಿ ಆರೋಗ್ಯ ಕಳೆದುಕೊಳ್ಳುವುದು ಸಹಜ. ಆದರೆ ಇಲ್ಲೊಬ್ಬ ಉದ್ಯೋಗಿ ಸಿಗರೇಟ್ ಸೇವನೆ ಮಾಡಿ 8 ಲಕ್ಷ ರೂ. ಕಳೆದುಕೊಂಡಿದ್ದಾನೆ. 61 ವರ್ಷದ ಸರ್ಕಾರಿ ಉದ್ಯೋಗಿ ಇಂಥದ್ದೊಂದು ನಷ್ಟಕ್ಕೆ ಒಳಗಾಗಿದ್ದಾನೆ.

    ಜಪಾನ್​​ನಲ್ಲಿ ಇಂಥದ್ದೊಂದು ಘಟನೆ ನಡೆದಿರುವ ಕುರಿತು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. ಇಲ್ಲಿನ ಸರ್ಕಾರಿ ಉದ್ಯೋಗಿಯೊಬ್ಬ ಕೆಲಸದ ಅವಧಿಯಲ್ಲಿ ಧೂಮಪಾನ ಮಾಡಿದ್ದಕ್ಕೆ ಈತನಿಗೆ 1.44 ಮಿಲಿಯನ್ ಯೆನ್ ಅಂದರೆ ಸುಮಾರು 8 ಲಕ್ಷ ರೂ. ದಂಡ ವಿಧಿಸಿದ್ದಾರೆ.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಇಲ್ಲಿನ ಹಣಕಾಸು ಇಲಾಖೆಯ ಮೂವರು ಪದೇಪದೆ ಧೂಮಪಾನ ಮಾಡಿ ಸಿಕ್ಕಿಹಾಕಿಕೊಂಡಿದ್ದು, ಅವರಿಗೆ ಕೆಲಸದ ಅವಧಿಯಲ್ಲಿ ಧೂಮಪಾನ ಮಾಡದಂತೆ ಎಚ್ಚರಿಕೆಯನ್ನೂ ನೀಡಲಾಗಿತ್ತು. ಅಲ್ಲದೆ ಸಿಕ್ಕಿಹಾಕಿಕೊಂಡರೆ 6 ತಿಂಗಳ ಸಂಬಳದಲ್ಲಿ ಶೇ. 10 ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಅದಾಗ್ಯೂ ಅವರು ತಿದ್ದಿಕೊಳ್ಳದೆ ತಮ್ಮ ವ್ಯಸನ ಮುಂದುವರಿಸಿದ್ದರು. ಆ ಪೈಕಿ 61 ವರ್ಷದ ಒಬ್ಬ ಉದ್ಯೋಗಿಗೆ ಈ ದೊಡ್ಡ ಪ್ರಮಾಣದ ದಂಡ ವಿಧಿಸಲಾಗಿದೆ.

    ಇದನ್ನೂ ಓದಿ: ಈ ಯಂತ್ರವೊಂದಿದ್ದರೆ ಸಾಕು, ಕಳ್ಳರಿಗೆ ‘ಹೊಗೆ’ನೇ; ಕಳವಿಗೆ ಬಂದವರು ಧೂಮಕ್ಕೆ ಹೆದರಿ ಪರಾರಿ!?

    ಈತ ತನ್ನ ಕೆಲಸದ ಅವಧಿಯಲ್ಲಿ ಅಂದರೆ ಹದಿನಾಲ್ಕೂವರೆ ವರ್ಷಗಳಲ್ಲಿ ಒಟ್ಟು 4512 ಸಲ ಧೂಮಪಾನ ಮಾಡಿದ್ದಾನೆ. ಅರ್ಥಾತ್​ ಕೆಲಸದ ಅವಧಿಯಲ್ಲಿ ಒಟ್ಟು 355 ಗಂಟೆ 19 ನಿಮಿಷಗಳನ್ನು ಧೂಮಪಾನದಲ್ಲೇ ಕಳೆದಿದ್ದಾನೆ. ಇದಕ್ಕಾಗಿ ಈತನಿಗೆ ವೇತನದಲ್ಲಿ ಶೆ. 10 ಕಡಿತ ಮಾಡುವ ಮೂಲಕ ಸುಮಾರು 8 ಲಕ್ಷ ರೂ. ದಂಡ ವಿಧಿಸಲಾಗಿದೆ. –ಏಜೆನ್ಸೀಸ್

    ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

    ಪ್ರಾಮಾಣಿಕ ಎಸ್​ಐ ಎಂದು ಗಣರಾಜ್ಯೋತ್ಸವದಂದು ಪ್ರಶಸ್ತಿ ಪಡೆದಿದ್ದಾಕೆ 5 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts