More

    ಪ್ರಾಮಾಣಿಕ ಎಸ್​ಐ ಎಂದು ಗಣರಾಜ್ಯೋತ್ಸವದಂದು ಪ್ರಶಸ್ತಿ ಪಡೆದಿದ್ದಾಕೆ 5 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ಲು!

    ಹರಿಯಾಣ: ಪ್ರಾಮಾಣಿಕ ಎಸ್​​ಐ ಎಂದು ಈಕೆಗೆ ಗಣರಾಜ್ಯೋತ್ಸವದಂದು ಪ್ರಶಸ್ತಿ ನೀಡಲಾಗಿತ್ತು. ಆದರೆ ಆಕೆಯೇ 5 ಸಾವಿರ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದಿದ್ದಾಳೆ. ಹರಿಯಾಣದ ಭವಾನಿ ಖೇರ ಪೊಲೀಸ್ ಠಾಣೆಯ ಎಸ್​​ಐ ಮುನ್ನಿದೇವಿ ಬಂಧಿತ ಆರೋಪಿ.

    ಮಹಿಳೆಯೊಬ್ಬರ ಪ್ರಕರಣದಲ್ಲಿ ತನಿಖಾಧಿಕಾರಿ ಆಗಿದ್ದ ಮುನ್ನಿದೇವಿ, 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಳು. ಹೀಗಾಗಿ ಈ ಮಹಿಳೆ ಎಸಿಬಿಗೆ ದೂರು ನೀಡಿದ್ದು, ಅವರು ವಿಶೇಷ ತಂಡ ರಚಿಸಿ ರೆಡ್​ಹ್ಯಾಂಡೆಡ್​ ಆಗಿ ಹಿಡಿಯಲು ಜಾಲ ಹೆಣೆದಿದ್ದರು.

    ನ್ಯಾಷನಲ್​ ಕ್ರೈಮ್​ ಇನ್​ವೆಸ್ಟಿಗೇಷನ್ ಬ್ಯೂರೋ ಎಂಬ ಎನ್​ಜಿಒ ಈ ಎಸ್​ಐ ರೆಡ್​ಹ್ಯಾಂಡೆಡ್ ಆಗಿ ಸಿಕ್ಕಿರುವ ವಿಡಿಯೋ ಟ್ವಿಟರ್​ನಲ್ಲಿ ಹಂಚಿಕೊಂಡಿದೆ. ಇದೇ ಲೇಡಿ ಎಸ್​ಐಗೆ ಉತ್ತಮ ಹಾಗೂ ಪ್ರಾಮಾಣಿಕ ಕರ್ತವ್ಯ ಎಂದು ಗಣರಾಜ್ಯೋತ್ಸವದಂದು ಗೌರವಿಸಲಾಗಿತ್ತು ಎಂಬ ಮಾಹಿತಿಯನ್ನೂ ಈ ವಿಡಿಯೋ ಜತೆ ಹಂಚಿಕೊಳ್ಳಲಾಗಿದೆ.

    ಪ್ಯಾನ್​-ಆಧಾರ್ ಲಿಂಕ್ ಗಡುವು ವಿಸ್ತರಣೆ: ನೀವೀಗ ಮಾಡಬೇಕಾದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts