More

    ಕರ್ನಾಟಕ ಚುನಾವಣೆ-2023: ಚುನಾವಣಾಪೂರ್ವ ಸಮೀಕ್ಷೆಗಳು ಪ್ರಕಟ; ಯಾರಿಗೆ ಎಷ್ಟು? ಇಲ್ಲಿದೆ ಪೂರ್ತಿ ವಿವರ..

    ನವದೆಹಲಿ: ಕರ್ನಾಟಕದ 2023ರ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಘೋಷಣೆಯಾಗುತ್ತಿದ್ದಂತೆ ಚುನಾವಣಾಪೂರ್ವ ಸಮೀಕ್ಷೆಗಳ ಫಲಿತಾಂಶ ಹೊರಬಿದ್ದಿದೆ. ಸದ್ಯಕ್ಕೆ ಐದು ಸಮೀಕ್ಷೆಗಳ ಫಲಿತಾಂಶ ಹೊರಬಿದ್ದಿದ್ದು, ಸರಾಸರಿಯಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ಕಂಡುಬಂದಿದೆ. ಎಬಿಪಿ ಸಿವೋಟರ್, ಮ್ಯಾಟ್ರಿಸ್​, ಲೋಕ್​ಪಾಲ್, ಪಾಪ್ಯುಲರ್ ಪೋಲ್ಸ್​​ ಮತ್ತು ಝೀ ನ್ಯೂಸ್​ ತಮ್ಮ ಚುನಾವಣಾಪೂರ್ವ ಸಮೀಕ್ಷೆಯನ್ನು ಪ್ರಕಟ ಮಾಡಿವೆ.

    ಎಬಿಪಿ ಸಿವೋಟರ್ ಚುನಾವಣಾಪೂರ್ವ ಸಮೀಕ್ಷೆ ಪ್ರಕಾರ ಕಾಂಗ್ರೆಸ್​ಗೆ 115ರಿಂದ 127 ಸ್ಥಾನ ಬರಲಿದ್ದು, ಬಿಜೆಪಿಗೆ 68-80 ಸ್ಥಾನ ಸಿಗಲಿದೆ. ಜೆಡಿಎಸ್​ಗೆ 23ರಿಂದ 35 ಸ್ಥಾನ ದಕ್ಕಲಿದೆ. ಇತರ ಪಕ್ಷಗಳು 0-2 ಸ್ಥಾನ ಗಳಿಸಲಿವೆ.

    ಮ್ಯಾಟ್ರಿಜ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್​ಗೆ 88ರಿಂದ 98 ಸ್ಥಾನ ಬರಲಿದ್ದು, ಬಿಜೆಪಿಗೆ 96-106 ಸ್ಥಾನ ಸಿಗಲಿದೆ. ಜೆಡಿಎಸ್​ಗೆ 23ರಿಂದ 33 ಸ್ಥಾನ ಸಿಗಲಿದೆ. ಇಲ್ಲಿ 2ರಿಂದ 7 ಇತರರ ಪಾಲಾಗಲಿದೆ.

    ಲೋಕ್​ಪೋಲ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್​ 116-123, ಬಿಜೆಪಿ 77-83, ಜೆಡಿಎಸ್​ 21-27 ಸ್ಥಾನ ಪಡೆಯಲಿದ್ದು, ಇತರ ಪಕ್ಷಗಳು 1-4 ಸ್ಥಾನ ಪಡೆಯಲಿವೆ.

    ಪಾಪ್ಯುಲರ್ ಪೋಲ್ಸ್​ ಪ್ರಕಾರ ಕಾಂಗ್ರೆಸ್​-ಬಿಜೆಪಿ ಸಮಬಲವಾಗಿ ಇರಲಿವೆ. ಅಂದರೆ ಎರಡಕ್ಕೂ ತಲಾ 82ರಿಂದ 87 ಸ್ಥಾನಗಳು ಸಿಗಲಿವೆ. ಜೆಡಿಎಸ್​ 42-45 ಸ್ಥಾನಗಳಿದ್ದು, ಇತರ ಪಕ್ಷಗಳಿಗೆ ಯಾವುದೇ ಸ್ಥಾನ ಸಿಗುವುದಿಲ್ಲ.

    ಝೀ ನ್ಯೂಸ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್​ 88-98, ಬಿಜೆಪಿ 96-106, ಜೆಡಿಎಸ್​ 23-33 ಸ್ಥಾನ ಗಳಿಸಲಿದ್ದು, 2ರಿಂದ 7 ಸ್ಥಾನಗಳು ಇತರ ಪಕ್ಷಗಳ ಪಾಲಾಗಲಿವೆ.

    ಎಬಿಪಿ ಸಿವೋಟರ್ ಸಮೀಕ್ಷೆ ವಿವರ

    ಕರ್ನಾಟಕ ಚುನಾವಣೆ-2023: ಚುನಾವಣಾಪೂರ್ವ ಸಮೀಕ್ಷೆಗಳು ಪ್ರಕಟ; ಯಾರಿಗೆ ಎಷ್ಟು? ಇಲ್ಲಿದೆ ಪೂರ್ತಿ ವಿವರ..ಎಬಿಪಿ ಸಿವೋಟರ್ ಸಮೀಕ್ಷೆ ಪ್ರಕಾರ ಮುಂಬೈ-ಕರ್ನಾಟಕ ಪ್ರದೇಶದಲ್ಲಿ ಕಾಂಗ್ರೆಸ್​-ಬಿಜೆಪಿಗೆ ತಲಾ ಶೇ. 43 ವೋಟ್ ಹಂಚಿಕೆಯಾಗಲಿದೆ. ಅದಾಗ್ಯೂ ಕಾಂಗ್ರೆಸ್​ ಈ ಭಾಗದಲ್ಲಿ 25ರಿಂದ 29 ಮತ್ತು ಬಿಜೆಪಿ 21ರಿಂದ 25 ಸೀಟು ಗೆಲ್ಲಲಿದೆ.

    ಕರಾವಳಿಯಲ್ಲಿ ಬಿಜೆಪಿ ಗರಿಷ್ಠ ಸ್ಥಾನ ಗೆಲ್ಲಲಿದೆ ಎಂದಾದರೂ ಕಾಂಗ್ರೆಸ್​ ಬಿಗಿ ಪೈಪೋಟಿ ನೀಡಲಿದೆ ಎಂಬುದೂ ಕಂಡುಬಂದಿದೆ. ಅಂದರೆ ಕರಾವಳಿಯಲ್ಲಿ ಬಿಜೆಪಿಗೆ ಶೇ. 46 ಮತ ಸಿಕ್ಕರೆ, ಕಾಂಗ್ರೆಸ್​ಗೆ ಶೇ. 41 ಮತ ಸಿಗಲಿದೆ. ಜೆಡಿಎಸ್​ ಶೇ. 6 ಮತ ಪಡೆಯಲಿದೆ ಎನ್ನಲಾಗಿದೆ.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಶೇ. 38 ಮತ ಗಳಿಸಿದರೆ, ಕಾಂಗ್ರೆಸ್ ಶೇ. 41 ಮತ ಗಳಿಸಲಿದೆ ಎನ್ನಲಾಗಿದೆ. ಅಂದರೆ ಬಿಜೆಪಿ 12ರಿಂದ 16 ಮತ್ತು ಕಾಂಗ್ರೆಸ್​ 18ರಿಂದ 22 ಸ್ಥಾನ ಗೆಲ್ಲಲಿದೆ.

    ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಶೇ. 20 ಮತ್ತು ಕಾಂಗ್ರೆಸ್​ಗೆ ಶೇ. 36 ಮತ ಚಲಾವಣೆ ಆಗಲಿದೆ. ಆದರೆ ಜೆಡಿಎಸ್​ಗೆ 26ರಿಂದ 27 ಮತ್ತು ಕಾಂಗ್ರೆಸ್​ಗೆ 24ರಿಂದ 28 ಸೀಟು ಸಿಗಲಿದ್ದು, ಬಿಜೆಪಿ 1 ಅಥವಾ ಗರಿಷ್ಠ 5 ಸ್ಥಾನಕ್ಕೆ ಸೀಮಿತವಾಗಲಿದೆ ಎಂದು ಸಮೀಕ್ಷೆ ಹೇಳಿದೆ.

    ಮತ್ತೆ ಸಿದ್ದರಾಮಯ್ಯ ಸಿಎಂ?

    ಮುಂದಿನ ಮುಖ್ಯಮಂತ್ರಿಯ ವೋಟಿಂಗ್​ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗರಿಷ್ಠ ಮತದಾನ ಆಗಿದ್ದು, ಅವರೇ ಮುಂದಿನ ಸಿಎಂ ಎಂದು ಸಮೀಕ್ಷೆ ಹೇಳಿದೆ. ಬಹುತೇಕ ಮತದಾರರು ಕಾಂಗ್ರೆಸ್​ ಬಹುಮತ ಗಳಿಸಲಿದೆ ಎಂದಿದ್ದು, ಸಿಎಂ ವೋಟಿಂಗ್​ನಲ್ಲಿ ಸಿದ್ದರಾಮಯ್ಯಗೆ ಶೇ. 39.1 ಮತದಾನ ಆಗುವ ಮೂಲಕ ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

    ಪ್ಯಾನ್​-ಆಧಾರ್ ಲಿಂಕ್ ಗಡುವು ವಿಸ್ತರಣೆ: ನೀವೀಗ ಮಾಡಬೇಕಾದ್ದೇನು?

    ‘ನಂಗೆ ಮನೆಯಲ್ಲೇ ಪ್ರೈವೆಸಿ ಇಲ್ಲ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳ್ಕೊಂಡ ಮಗ; ಅಪ್ಪ ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts