More

    ಪ್ಯಾನ್​-ಆಧಾರ್ ಲಿಂಕ್ ಗಡುವು ವಿಸ್ತರಣೆ: ನೀವೀಗ ಮಾಡಬೇಕಾದ್ದೇನು?

    ಬೆಂಗಳೂರು: ಪ್ಯಾನ್​-ಆಧಾರ್ ಲಿಂಕ್ ವಿಚಾರವಾಗಿ ಹಲವರು ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದು, ಕೇಂದ್ರ ಸರ್ಕಾರ ಇವೆರಡರ ಲಿಂಕ್​ಗೆ ವಿಧಿಸಿದ್ದ ಗಡುವನ್ನು ವಿಸ್ತರಿಸಿದ್ದರಿಂದ ಅವರೆಲ್ಲ ಸದ್ಯಕ್ಕೆ ನಿರಾಳರಾಗುವಂತಾಗಿದೆ.

    ಅಂದರೆ ಈ ಮೊದಲು ಇದೇ ಮಾ.31 ಕಡೇ ದಿನ ಎನ್ನಲಾಗಿದ್ದು, ಈಗ ಆ ಗಡುವನ್ನು ಜೂ. 30ರವರೆಗೂ ವಿಸ್ತರಿಸಲಾಗಿದೆ. ಹೀಗಾಗಿ ಇನ್ನೂ ಪ್ಯಾನ್​-ಆಧಾರ್ ಲಿಂಕ್ ಮಾಡಿರದವರಿಗೆ ಹೆಚ್ಚುವರಿಯಾಗಿ ಮೂರು ತಿಂಗಳ ಕಾಲಾವಕಾಶ ಸಿಕ್ಕಂತಾಗಿದೆ. ಒಂದು ವೇಳೆ ಅಷ್ಟರೊಳಗೆ ಲಿಂಕ್ ಮಾಡಿಸದಿದ್ದರೆ ಜುಲೈ 1ರಿಂದ ಅಂಥವರ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ.

    ಪ್ಯಾನ್​-ಆಧಾರ್ ಲಿಂಕ್ ಗಡುವೇನೋ ವಿಸ್ತರಣೆ ಆಯಿತು, ಆದರೆ ಸದ್ಯಕ್ಕೆ ಸಾರ್ವಜನಿಕರು ಮಾಡಬೇಕಾದ್ದೇನು ಎಂಬ ಬಗ್ಗೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಇದರಿಂದಾಗಿ ಅನಗತ್ಯ ತೊಂದರೆ ಹಾಗೂ ಕೊನೆಯ ಕ್ಷಣದ ಗಡಿಬಿಡಿಯನ್ನು ತಪ್ಪಿಸಬಹುದಾಗಿದೆ.

    ಇದನ್ನೂ ಓದಿ: ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

    1. ನಿಮ್ಮ ಪ್ಯಾನ್​-ಆಧಾರ್ ಲಿಂಕ್ ಆಗಿದೆಯೋ ಇಲ್ಲವೋ ಎಂಬ ಗೊಂದಲ ಬೇಡ. ಮೊದಲಿಗೆ ಲಿಂಕ್ ಆಗಿದೆಯೇ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಿ. ಅದಕ್ಕಾಗಿ ಈ ಕೆಳಗಿನ ಲಿಂಕ್​ ಬಳಸಿ, ನಂತರ ತೆರೆದುಕೊಳ್ಳುವ ಪುಟದಲ್ಲಿ ಪ್ಯಾನ್​ ಹಾಗೂ ಆಧಾರ್ ನಂಬರ್ ನಮೂದಿಸಿ, ‘ವ್ಯೂ ಲಿಂಕ್ ಆಧಾರ್ ಸ್ಟೇಟಸ್​’ ಕ್ಲಿಕ್ ಮಾಡಿ. ಆಗ ನಿಮ್ಮ ಪ್ಯಾನ್​-ಆಧಾರ್ ಲಿಂಕ್ ಆಗಿದೆಯೇ ಇಲ್ಲವೇ ಎಂಬುದು ಖಚಿತವಾಗುತ್ತದೆ.

    ಪ್ಯಾನ್-ಆಧಾರ್ ಲಿಂಕ್ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ..

    https://eportal.incometax.gov.in/iec/foservices/#/pre-login/link-aadhaar-status

    2. ಲಿಂಕ್ ಆಗಿಲ್ಲ ಎಂದಾದರೆ ಜೂ. 30ರ ವರೆಗೂ ಕಾಲಾವಕಾಶ ಇದೆ ಎಂದು ವಿಳಂಬ ಮಾಡಬೇಡಿ. ಇದರಿಂದ ಲಿಂಕ್ ಮಾಡಬೇಕಾದ ಸಂಗತಿ ಮರೆತು ಹೋಗುವ ಅಥವಾ ಕೊನೆಯ ಹಂತದಲ್ಲಿ ನೆನಪಾಗಿ ಗಡಿಬಿಡಿಯಲ್ಲಿ ಲಿಂಕ್ ಮಾಡಬೇಕಾಗಿ ಬರುವ ಸಾಧ್ಯತೆ ಇರುತ್ತದೆ.

    3. ನಿಮ್ಮ ಪ್ಯಾನ್-ಆಧಾರ್ ಲಿಂಕ್ ಆಗಿಲ್ಲ ಎಂದಾದರೆ ಮೊದಲು ಪ್ಯಾನ್​-ಆಧಾರ್ ಎರಡರಲ್ಲೂ ನಿಮ್ಮ ಹೆಸರು ಸರಿಯಾಗಿ ಹೊಂದುತ್ತಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಏಕೆಂದರೆ ಹೆಸರಿನಲ್ಲಿ ಸಣ್ಣ ವ್ಯತ್ಯಾಸ ಕಂಡುಬಂದರೂ ಲಿಂಕ್ ಸಾಧ್ಯವಾಗುವುದಿಲ್ಲ ಎಂದು ಈಗಾಗಲೇ ಲಿಂಕ್ ಮಾಡಲು ಯತ್ನಿಸಿದ್ದ ಕೆಲವರು ಹೇಳಿಕೊಂಡಿದ್ದಾರೆ. ಒಂದು ವೇಳೆ ಪ್ಯಾನ್-ಆಧಾರ್​ ಹೆಸರಲ್ಲಿ ವ್ಯತ್ಯಾಸ ಕಂಡುಬಂದಲ್ಲಿ, ಮೊದಲು ಸರಿಯಾದ ಹೆಸರನ್ನು ಅಪ್​ಡೇಟ್ ಮಾಡಿಸಿಕೊಳ್ಳಿ. ನಂತರ ಪ್ಯಾನ್​-ಆಧಾರ್ ಲಿಂಕ್ ಮಾಡಿಕೊಳ್ಳಿ. ಲಿಂಕ್ ಮಾಡಲು 1 ಸಾವಿರ ರೂ. ಪಾವತಿಸಬೇಕು.

    ಪ್ಯಾನ್​-ಆಧಾರ್ ಲಿಂಕ್ ಮಾಡಲು ಈ ಕೆಳಗಿನ ಲಿಂಕ್ ಬಳಸಿ.

    https://eportal.incometax.gov.in/iec/foservices/#/pre-login/bl-link-aadhaar

    ಚುನಾವಣಾ ಆಯೋಗಕ್ಕೆ ವಿಶೇಷ ಮನವಿ: ಜಾರಿಯಾಗುತ್ತಾ ಹೊಸ ಸೂಚನೆ?

    ಚುನಾವಣೆಗೆ ನಿಲ್ಲುವವರಿಗೂ ಇಲ್ಲಿ 5 ಲಕ್ಷ ರೂ. ಕೊಡ್ತಾರೆ!; ಷರತ್ತುಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts