More

    ಹೆಣ್ಮಕ್ಕಳೇ ಹುಷಾರ್; ಹೇರ್​ ಸ್ಟ್ರೈಟ್ನಿಂಗ್ ಟ್ರೀಟ್​​ಮೆಂಟ್​​ನಿಂದ ಕಿಡ್ನಿಗೆ ಡ್ಯಾಮೆಜ್​..

    ನವದೆಹಲಿ: ಹೇರ್ಸ್ಟ್ರೈಟ್ನಿಂಗ್ ಟ್ರೀಟ್​​ಮೆಂಟ್​​ನಿಂದ​​ ರಾಸಾಯನಿಕವು ಚರ್ಮದ ಮೂಲಕ ಮೂತ್ರಪಿಂಡವನ್ನು ಪ್ರವೇಶಿಸಿ ಯುವತಿಯ ಕಿಡ್ನಿ ವೈಫಲ್ಯಕ್ಕೆ ಕಾರಣವಾದ  ಘಟನೆಯೊಂದು ಬೆಳಕಿಗೆ ಬಂದಿದೆ. ದಿ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ನಲ್ಲಿ ಪ್ರಕಟವಾದ ವರದಿಯಲ್ಲಿ ವೈದ್ಯರೊಬ್ಬರು ಹೇರ್ ಸ್ಟ್ರೈಟ್ನಿಂಗ್ ಮಾಡಿಸಿಕೊಂಡಿದ್ದಕ್ಕೆ ಮಹಿಳೆಯ ಆರೋಗ್ಯದಲ್ಲಿ ಆದ ಏರುಪೇರಿನ ಬಗ್ಗೆ ವಿವರಿಸಿದ್ದಾರೆ.

    ವೈದ್ಯಕೀಯ ತಜ್ಞರ ಪ್ರಕಾರ,  26 ವರ್ಷದ ಯುವತಿಯ ಜೂನ್ 2020 ರಿಂದ ಏಪ್ರಿಲ್ 2021 ರವರೆಗೆ ಹಲವಾರು ಬಾರಿ ಹೇರ್ ಸ್ಟ್ರೈಟ್ನಿಂಗ್ ಮಾಡಿಸಿಕೊಂಡಿದ್ದಾಳೆ. ಪ್ರತೀ ಬಾರಿ ಹೇರ್ ಸ್ಟ್ರೈಟನಿಂಗ್ ಮಾಡಿಸಿದ ಬಳಿಕ ವಾಂತಿ ಮತ್ತು ಜ್ವರ, ಬೆನ್ನು ನೋವು ಮತ್ತು ನೆತ್ತಿ ಸುಡುತ್ತಿರುವಂತೆ,ಅತಿಸಾರದಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ.  ಸ್ಟ್ರೈಟನಿಂಗ್ ಬಳಿಕ ಆರೋಗ್ಯ ಸಮಸ್ಯೆ ಹೆಚ್ಚಾಗಿದ್ದು, ನೆತ್ತಿಯ ಮೇಲೆ ಹುಣ್ಣು ಕಾಣಿಸಿಕೊಂಡಿರುವ ಕಾರಣ ಆಸ್ಪತ್ರೆಗೆ ತೆರಳಿದ್ದಾಳೆ. ಈ ಹೇರ್ ಟ್ರೀಟ್ ಮೆಂಟ್ ಗೂ ಮುಂಚೆ ಮಹಿಳೆಗೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ.

    ವೈದ್ಯರು ಆಕೆಗೆ ಹಲವಾರು ಪರೀಕ್ಷೆಗಳನ್ನು ಮಾಡಿಸಿದ ನಂತರ ವರದಿಗಳಲ್ಲಿ, ಆಕೆಯ ರಕ್ತದಲ್ಲಿ ಕ್ರಿಯೇಟಿನೈನ್ ಅಧಿಕವಾಗಿರುವುದನ್ನು ವೈದ್ಯರು ಗಮನಿಸಿದ್ದಾರೆ. ಮೂತ್ರದಲ್ಲಿ ರಕ್ತ ಕಂಡು ಬಂದಿದ್ದರಿಂದ ಸಿಟಿ ಸ್ಕ್ಯಾನ್ ಮಾಡಿಸಲಾಗಿತ್ತು. ಕಿಡ್ನಿ ವೈಫಲ್ಯವೂ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ವೈದ್ಯರು ಮಹಿಳೆಯನ್ನು ವಿಚಾರಿಸಿದಾಗ ಆಕೆಯ ಹೇರ್ ಸ್ಟ್ರೈಟನಿಂಗ್ ಕ್ರೀಂನಲ್ಲಿರುವ ಗ್ಲೈಆಕ್ಸಿಲಿಕ್ ಆಸಿಡ್ ಎಂಬ ರಾಸಾಯನಿಕವು ಚರ್ಮದ ಕಿರಿಕಿರಿಯನ್ನುಂಟು ಮಾಡುತ್ತಿದೆ. ರಾಸಾಯನಿಕವು ಚರ್ಮದ ಮೂಲಕ ಮೂತ್ರಪಿಂಡವನ್ನು ಪ್ರವೇಶಿಸಿ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಿದೆ. ಆಕೆಯ ಮೂತ್ರಪಿಂಡದ ಕೊಳವೆಗಳಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಹರಳುಗಳ ಶೇಖರಣೆಯಿಂದ ಉಂಟಾಗುವ ಅಪರೂಪದ ಅಸ್ವಸ್ಥತೆ ಎಂದು ವೈದ್ಯರು ಬಹಿರಂಗಪಡಿಸಿದರು.

    ಇದೆ. ಕೂದಲನ್ನು ನಯವಾಗಿ, ನೇರವಾಗಿಗೊಳಿಸುವ ವಿನ್ಯಾಸ ತಂತ್ರ ಮೊದಲಿನಿಂದಲೂ ಇದೆ. ಆದರೆ ಅದನ್ನು ಮಾಡುವಾಗ ಬಳಸುವ ಕೆಮಿಕಲ್ ಮೇಲೆ ನಿಗಾವಹಿಸಬೇಕಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts