More

    ಚುನಾವಣೆಗೆ ನಿಲ್ಲುವವರಿಗೂ ಇಲ್ಲಿ 5 ಲಕ್ಷ ರೂ. ಕೊಡ್ತಾರೆ!; ಷರತ್ತುಗಳೇನು?

    ಬೆಂಗಳೂರು: ರಾಜಕೀಯ ವ್ಯವಸ್ಥೆ ಸಂಪೂರ್ಣ ಬದಲಾಗಬೇಕು ಎಂದು ಉದ್ಯಮಿಯೊಬ್ಬರು ರಾಜಕಾರಣದಲ್ಲಿ ಹೊಸದೊಂದು ಪ್ರಯೋಗ ಮಾಡಲು ಮುಂದಾಗಿದ್ದಾರೆ. ಆ ಮೂಲಕ ಭ್ರಷ್ಟಾಚಾರರಹಿತ ವ್ಯವಸ್ಥೆ ತರಲು ಅವರು ಕಾರ್ಯಪ್ರವೃತ್ತರಾಗಿದ್ದಾರೆ. ಈಗಿನ ಅವ್ಯವಸ್ಥೆಗೆ, ಭ್ರಷ್ಟಾಚಾರಕ್ಕೆ ‘ನಾವೇ ಮೂಲ ಕಾರಣ’ ಎನ್ನುವ ಇವರು ಹೊಸ ಚಿಂತನೆಯೊಂದಿಗೆ ಸಜ್ಜಾಗಿದ್ದಾರೆ.

    ಅಂದಹಾಗೆ ಈ ಉದ್ಯಮಿಯ ಹೆಸರು ಅಣ್ಣಾಸಾಹೇಬ್ ಪಾಟೀಲ. ಬೆಳಗಾವಿಯ ಷಹಪುರದ ಇವರು ಈ ಸಲ ಹತ್ತು ಅಭ್ಯರ್ಥಿಗಳಿಗೆ ತಾವೇ ತಲಾ ಐದು ಲಕ್ಷ ರೂ. ಕೊಟ್ಟು ಚುನಾವಣೆಗೆ ಇಳಿಸಿ, ಉತ್ತಮ ಅಭ್ಯರ್ಥಿಗಳು ರಾಜಕೀಯಕ್ಕೆ ಬರುವಂತೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ನಮಗೆ ದುಡ್ಡು-ಅಧಿಕಾರ ಬೇಕಾಗಿಲ್ಲ. ರಾಜಕಾರಣ ಎಂದರೆ ಸಂಪೂರ್ಣ ಸಮಾಜಸೇವೆ ಎಂದು ನಂಬಿರುವನು ನಾನು. ಮೇಲ್ಮಧ್ಯಮ ವರ್ಗದ ಒಬ್ಬ ಪ್ರಾಮಾಣಿಕ ವ್ಯಕ್ತಿ ತನ್ನ ಮನೆಯನ್ನೂ ನೋಡಿಕೊಂಡು ರಾಜಕಾರಣ ಮಾಡಲು ಸಿದ್ಧವಿದ್ದರೆ ಅಂಥವರನ್ನು ಚುನಾವಣೆಗೆ ಇಳಿಸಬೇಕು. ಏಕೆಂದರೆ ಭ್ರಷ್ಟಾಚಾರ ಮಾಡಿ ಕ್ಲೀನ್​ಚಿಟ್ ತೆಗೆದುಕೊಳ್ಳುವವರಿಗಿಂತ ಭ್ರಷ್ಟಾಚಾರಿಗಳಲ್ಲದವರನ್ನು ಚುನಾವಣೆಗೆ ನಿಲ್ಲಿಸಬೇಕು ಎಂಬುದು ತಮ್ಮ ಉದ್ದೇಶ ಎನ್ನುತ್ತಾರೆ ಅವರು.

    ಚುನಾವಣೆಗೆ ನಿಲ್ಲುವವರಿಗೂ ಇಲ್ಲಿ 5 ಲಕ್ಷ ರೂ. ಕೊಡ್ತಾರೆ!; ಷರತ್ತುಗಳೇನು?ಇದು ನನ್ನದೊಂದು ಹುಚ್ಚು ಪ್ರಯತ್ನ ಎಂದರೂ ತಪ್ಪೇನಿಲ್ಲ. ಯಾವುದೇ ಒಂದು ಹೊಸ ಪ್ರಯೋಗ ಮಾಡುವಾಗ ಇಂಥ ಹುಚ್ಚು ಇರಬೇಕು. ನಾನು ಇದರಲ್ಲಿ ಸೋಲಬಹುದು, ಸೋಲುವ ಸಾಧ್ಯತೆ ಶೇ. 90ರಷ್ಟಿದೆ. ಆದರೆ ನಾನು ಸೋತರೆ ಇದು ನನ್ನ ಸೋಲಲ್ಲ, ಸಮಾಜದಲ್ಲಿ ಒಳ್ಳೆಯ ಅಭ್ಯರ್ಥಿಗಳನ್ನು ಆರಿಸುವಲ್ಲಿ ಜನರು ಸೋತಿದ್ದಾರೆ ಎಂದರ್ಥ.
    | ಅಣ್ಣಾಸಾಹೇಬ ಪಾಟೀಲ, ಉದ್ಯಮಿ.

    ಸಮಾಜದಲ್ಲಿ ಉತ್ತಮರು ಇಲ್ಲ ಅಂತಲ್ಲ, ಆದರೆ ನಾವು ಅವರನ್ನು ಗುರುತಿಸುತ್ತಿಲ್ಲ ಎಂಬುದು ನನ್ನ ಅನಿಸಿಕೆ. ಹಾಗಾಗಿ ಒಳ್ಳೆಯ ಅಭ್ಯರ್ಥಿಗಳನ್ನು ಈ ಸಲ ಉತ್ತರ ಕರ್ನಾಟಕ ಭಾಗದಲ್ಲಿ ಚುನಾವಣೆಗೆ ಇಳಿಸಲು ಮುಂದಾಗಿದ್ದೇನೆ. ಹತ್ತು ಅಭ್ಯರ್ಥಿಗಳಿಗೆ ತಲಾ ಐದು ಲಕ್ಷ ರೂ. ನೀಡಲಾಗುವುದು. ಅವರಿಗೆ ಬೇಕಾದ ಕಾನೂನು ನೆರವು ಕೂಡ ಒದಗಿಸಲಾಗುವುದು. ಅಂಥ ಅಭ್ಯರ್ಥಿಗಳು ಪಕ್ಷೇತರರಾಗಿ ನಿಲ್ಲಬೇಕು. ಅವರು ಯಾರಿಗೂ ಹಣ ಖರ್ಚು ಮಾಡಲ್ಲ, ಅವರು ಕೊಡಲಿಕ್ಕೂ ಸಾಧ್ಯವಿಲ್ಲ, ಹಾಗೇ ಅವರು ತೆಗೆದುಕೊಳ್ಳುವ ಹಾಗಿಲ್ಲ ಎನ್ನುವ ಇವರು ಒಂದು ಸ್ವಚ್ಛ ಭ್ರಷ್ಟಾಚಾರರಹಿತ ಆಡಳಿತ ತರುವುದು ನನ್ನ ಗುರಿ ಎನ್ನುತ್ತಾರೆ. ನಮ್ಮ ಷರತ್ತಿನ ಪ್ರಕಾರ ಅಭ್ಯರ್ಥಿಗಳಾಗುವವರು ನಮ್ಮಲ್ಲಿಗೆ ಅರ್ಜಿ ಹಾಕಿದರೆ ಅಂಥವರನ್ನು ಆಯ್ಕೆ ಮಾಡಲು ಒಂದು ಸಮಿತಿ ಇದೆ. ಆ ಸಮಿತಿ ಮೂಲಕ ಆಯ್ಕೆ ಮಾಡಿ ಚುನಾವಣೆಗೆ ಇಳಿಸಲಾಗುವುದು ಎಂದು ತಿಳಿಸಿದ್ದಾರೆ.

    ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

    ಆನ್​ಲೈನ್​ನಲ್ಲಿ ಐಫೋನ್​ ಬುಕ್​ ಮಾಡಿದ್ರೆ ಬಂದಿದ್ದು ನಿರ್ಮಾ ಸೋಪ್​!; ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts