More

    ಆನ್​ಲೈನ್​ನಲ್ಲಿ ಐಫೋನ್​ ಬುಕ್​ ಮಾಡಿದ್ರೆ ಬಂದಿದ್ದು ನಿರ್ಮಾ ಸೋಪ್​!; ಮುಂದೇನಾಯ್ತು?

    ಬೆಂಗಳೂರು: ಆನ್​ಲೈನ್​ನಲ್ಲಿ ಫೋನ್​ ಬುಕ್ ಮಾಡಿದ ನಂತರ ಅದರ ಬದಲಿಗೆ ಇನ್ಯಾವುದೋ ಕಡಿಮೆ ಬೆಲೆಯ ವಸ್ತುವನ್ನು ಕಳಿಸಿಕೊಟ್ಟಂಥ ಪ್ರಕರಣಗಳು ಈ ಹಿಂದೆ ಹಲವು ನಡೆದಿವೆ. ಅಂಥದ್ದೇ ಇನ್ನೊಂದು ಪ್ರಕರಣ ನಡೆದಿದ್ದು, ಅದರಲ್ಲಿ ಐಫೋನ್​ ಬುಕ್ ಮಾಡಿದ್ದವರಿಗೆ ಒಂದು ನಿರ್ಮಾ ಸೋಪ್ ಜತೆಗೆ ಕೀಪ್ಯಾಡ್ ಫೋನ್​ ಬಂದಿತ್ತು. ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿದ್ದು, ಇದೀಗ ತೀರ್ಪು ಹೊರಬಿದ್ದಿದೆ.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಕೊಪ್ಪಳದ ಎಸ್. ಹರ್ಷ ಎಂಬಾತ 2021ರಲ್ಲಿ ಫ್ಲಿಪ್​ಕಾರ್ಟ್​ನಲ್ಲಿ ಐಫೋನ್ ಬುಕ್ ಮಾಡಿದ್ದಲ್ಲದೆ, 48,999 ರೂ. ಪಾವತಿ ಕೂಡ ಮಾಡಿದ್ದರು. ಅದರಂತೆ ಬಂದ ಪಾರ್ಸೆಲ್ ತೆರೆದು ನೋಡಿದಾಗ ಅದರಲ್ಲಿ ಒಂದು ಕೀಪ್ಯಾಡ್ ಫೋನ್ ಜತೆಗೆ ಒಂದು ನಿರ್ಮಾ ಸೋಪ್​ ಬಾರ್ ಇದ್ದಿತ್ತು. ಇದರ ವಿರುದ್ಧ ಅವರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.

    ಇದನ್ನೂ ಓದಿ: ಹೃದಯಾಘಾತಕ್ಕೀಡಾಗಿ ಮೃತಪಟ್ಟ ಕನ್ನಡ ಸಿನಿಮಾ ನಿರ್ದೇಶಕ

    ನ್ಯಾಯಸಮ್ಮತವಲ್ಲದ ವ್ಯವಹಾರ ನಡೆಸಿದ ಹಿನ್ನೆಲೆಯಲ್ಲಿ ಫ್ಲಿಪ್​ಕಾರ್ಟ್ ಮತ್ತು ಅದರ ರಿಟೇಲರನ್ನು ತರಾಟೆಗೆ ತೆಗೆದುಕೊಂಡ ಆಯೋಗ ದೂರುದಾರರಿಗೆ ಒಟ್ಟು 25 ಸಾವಿರ ರೂ. ದಂಡ ನೀಡುವಂತೆ ಆದೇಶಿಸಿದೆ. ಅಲ್ಲದೆ ಫೋನ್​ ಖರೀದಿಗೆಂದು ಪಾವತಿಸಿದ್ದ 48,999 ರೂ. ಎರಡು ತಿಂಗಳ ಒಳಗೆ ಹಿಂದಿರುಗಿಸುವಂತೆಯೂ ನಿರ್ದೇಶನ ನೀಡಿದೆ. ಜೊತೆಗೆ ಸರಿಯಾದ ರೀತಿಯಲ್ಲಿ ವ್ಯವಹಾರ ನಡೆಸುವಂತೆ ತಾಕೀತು ಮಾಡಿದೆ.

    ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts