ಮೂಡಬಿದ್ರೆಗೆ ಸರ್ಕಾರಿ ಬಸ್ ಕೋರ್ಟ್ ಆದೇಶ!, ಪರವಾಣಗಿ ತಡೆ ವಿರುದ್ದ ಕೆಎಸ್‌ಆರ್‌ಟಿಸಿಯಿಂದ ಕೋರ್ಟ್‌ಗೆ ಮೊರೆ!, ಮಂಗಳೂರಿನಿಂದ 56 ಟ್ರಿಪ್ ಸರ್ಕಾರಿ ಓಡಿಸಲು ಕೋರ್ಟ್ ಆದೇಶ

mng_24 sept KSRTC 2
Published on

ಶ್ರವಣ್‌ಕುಮಾರ್ ನಾಳ, ಮಂಗಳೂರು

ಮಂಗಳೂರು ಹಾಗೂ ಮೂಡುಬಿದಿರೆ ನಡುವೆ ಸರ್ಕಾರಿ ಬಸ್ ಸಂಚಾರಕ್ಕಿದ್ದ ತೊಡಕು ನಿವಾರಣೆಯಾಗಿದೆ. ಈ ರೂಟ್‌ನಲ್ಲಿ ಸರ್ಕಾರಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಕೋರ್ಟ್ ಆದೇಶ ನೀಡಿದೆ.
ಮಂಗಳೂರು-ಮೂಡುಬಿದಿರೆ ಮಾರ್ಗದ ಗುರುಪುರ ಹೊಸ ಸೇತುವೆ ನಿರ್ಮಾಣದ ಬಳಿಕ ಮಂಗಳೂರು-ಮೂಡುಬಿದಿರೆ ಪ್ರಯಾಣಿಸುವ ಒಟ್ಟು ಎಂಟು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಜಿಲ್ಲಾಡಳಿತದಿಂದ ಪರವಾನಗಿ ತಡೆಹಿಡಿಯಲಾಗಿತ್ತು. ವಿಭಜಿತ ದ.ಕ ಜಿಲ್ಲೆಯ ಖಾಸಗಿ ಸಂಚಾರ ಲಾಬಿ ಮಧ್ಯೆ ಕೆಎಸ್‌ಆರ್‌ಟಿಸಿಗೆ ಈ ನಿರ್ಧಾರ ಹಿನ್ನಡೆಯಾಗಿದ್ದರಿಂದ ಜಿಲ್ಲಾ ಸಾರಿಗೆ ಸಂಚಾರ ಪರವಾನಗಿ ಸಮಿತಿ ನಿರ್ಧಾರವನ್ನು ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಕೋರ್ಟ್ ಮೊರೆ ಹೋಗಿತ್ತು.
ಈ ಹಿಂದೆ ಮೂಡುಬಿದಿರೆ ಮಾರ್ಗದಲ್ಲಿ ಗುರುಪುರ ಹಳೇ ಸೇತುವೆ ದುರ್ಬಲವಾಗಿದೆ ಎಂದು ಕೆಎಸ್‌ಆರ್‌ಟಿಸಿ ಬಸ್‌ಗೆ ದೊರೆತ ಪರವಾನಗಿ ತಡೆಹಿಡಿಯಲಾಗಿತ್ತು. ಹೊಸ ಸೇತುವೆ ನಿರ್ಮಾಣ ಅಥವಾ ಹಳೇ ಸೇತುವೆ ದುರಸ್ತಿ ಬಳಿಕ ಬಸ್‌ಗಳಿಗೆ ಟ್ರಿಪ್ ಓಡಿಸಲು ಸಾರಿಗೆ ಇಲಾಖೆಯಿಂದ ಕೆಎಸ್‌ಆರ್‌ಟಿಸಿಗೆ ಪರವಾನಗಿ ನೀಡುವ ಭರವಸೆಯನ್ನೂ ನೀಡಲಾಗಿತ್ತು. ಆದರೆ ಖಾಸಗಿ ಬಸ್‌ಗಳಿಗೆ ಯಾವುದೇ ನಿರ್ಬಂಧ ವಿಧಿಸದೆ ಸಂಚಾರಕ್ಕೆ ವ್ಯವಸ್ಥೆ ಮಾಡಿರುವುದರಿಂದ ಇದೊಂದು ಖಾಸಗಿ ಬಸ್ ಲಾಬಿ ಎಂಬ ಆರೋಪ ಕೇಳಿ ಬಂದಿತ್ತು. ಇದಾಗಿ ವರ್ಷಗಳ ಬಳಿಕ ಗುರುಪುರ ಹೊಸ ಸೇತುವೆ ನಿರ್ಮಾಣ ಬಳಿಕ ಈ ನಿರ್ಬಂಧ ತೆರವುಗೊಂಡಿತ್ತು. ನಂತರ ಎಂಟು ಬಸ್‌ಗಳಿಗೆ 56 ಟ್ರಿಪ್ ಓಡಿಸಲು ಕೆಎಸ್‌ಆರ್‌ಟಿಸಿ ಪರವಾನಗಿ ಕೇಳಿತ್ತು. ಆದರೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಲ್ಲಾಡಳಿತದ ಜಂಟಿ ಸಮಿತಿ ಸೀಮಿತ ಟ್ರಿಪ್ ಓಡಿಸಲು ಮಾತ್ರ ಅವಕಾಶ ನೀಡಿತ್ತು. ಈ ಕ್ರಮದ ವಿರುದ್ಧ ಕೆಎಸ್‌ಆರ್‌ಟಿಸಿ ನ್ಯಾಯಾಲಯದ ಮೆಟ್ಟಿಲೇರಿತ್ತು.

//ಬಾಕ್ಸ್//

24 ಟ್ರಿಪ್ ಮಾತ್ರ ಓಡಿಸಲು ಪರವಾನಗಿ
ಮಂಗಳೂರು-ಮೂಡುಬಿದಿರೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಈ ಭಾಗದ ಸಾರ್ವಜನಿಕರ ಬಹುದಿನದ ಬೇಡಿಕೆ. ಆದರೆ ಸಾರ್ವಜನಿಕರ ಈ ಬೇಡಿಕೆಗೆ ಸ್ಪಂದಿಸಿದ ಸರ್ಕಾರ ಸರ್ಕಾರಿ ಬಸ್ ಸಂಚರಿಸಲು ವ್ಯವಸ್ಥೆ ಕಲ್ಪಸಿದೆ. ಈ ಹಿನ್ನೆಲೆಯಲ್ಲಿ ಮೂಡುಬಿದಿರೆ ಮಾರ್ಗವಾಗಿ ಬಸ್‌ಗಳಿಗೆ 56 ಟ್ರಿಪ್ ಓಡಿಸಲು ಕೆಎಸ್‌ಆರ್‌ಟಿಸಿ ಪರವಾನಗಿ ಕೇಳಿತ್ತು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಗೂ ಆರ್‌ಟಿಒ ನೇತೃತ್ವದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು 24 ಟ್ರಿಪ್ ಮಾತ್ರ ಓಡಿಸಲು ಪರವಾನಗಿ ನೀಡಿತ್ತು. ಈ ನಿರ್ಧಾರ ಕೆಎಸ್‌ಆರ್‌ಟಿಸಿ ಅಸಮಾಧಾನಕ್ಕೆ ಕಾರಣ.

//ಬಾಕ್ಸ್//

ಕೆಎಸ್‌ಆರ್‌ಟಿಸಿ ಪರ ಕೋರ್ಟ್ ಆದೇಶ
ಎಂಟು ಬಸ್‌ಗಳಿಗೆ 56 ಟ್ರಿಪ್ ಓಡಿಸಲು ಕೆಎಸ್‌ಆರ್‌ಟಿಸಿ ಸಮರ್ಥವಾಗಿದೆ. ಆದರೆ 24 ಟ್ರಿಪ್ ಮಾತ್ರ ಓಡಿಸಲು ಪರವಾನಗಿ ನೀಡಿರುವುದನ್ನು ಕೆಎಸ್‌ಆರ್‌ಟಿಸಿ ಒಪ್ಪಲು ಸಾಧ್ಯವಿಲ್ಲ. ಮಂಗಳೂರು-ಮೂಡಿಬಿದಿರೆ ಮಾರ್ಗವಾಗಿ 56 ಟ್ರಿಪ್ ಓಡಿಸಲು ಆದೇಶ ನೀಡುವಂತೆ ಕೆಎಸ್‌ಆರ್‌ಟಿಸಿ ಕೋರ್ಟ್ ಮೆಟ್ಟಿಲೇರಿತ್ತು. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಲ್ಲಾಡಳಿತದ ಜಂಟಿ ಸಮಿತಿಯ ನಿರ್ಣಯವನ್ನು ಅಸಿಂಧುಗೊಳಿಸಿ ಎಂಟು ಬಸ್‌ಗಳಿಗೆ 56 ಟ್ರಿಪ್ ಓಡಿಸಲು ಕೆಎಸ್‌ಆರ್‌ಟಿಸಿಗೆ ಪರವಾನಗಿ ನೀಡುವಂತೆ ಸಮಿತಿಗೆ ಆದೇಶ ನೀಡಿದೆ. ಪ್ರಸ್ತುತ ಚುನಾವಣಾ ನೀರಿ ಸಂಹಿತೆ ಇರುವುದರಿಂದ ಮುಂದಿನ ತಿಂಗಳ ಬಳಿಕ ಸಮಿತಿಯಿಂದ ಕೆಎಸ್‌ಆರ್‌ಟಿಸಿಗೆ ಪರವಾನಗಿ ಲಭಿಸುವ ಸಾಧ್ಯತೆ ಇದೆ.

///ಕ್ವೋಟ್//

ಮಂಗಳೂರು-ಮೂಡುಬಿದಿರೆ ನಡುವೆ 8 ಬಸ್‌ಗಳಿಗೆ 56 ಟ್ರಿಪ್ ಓಡಿಸಲು ಕೆಎಸ್‌ಆರ್‌ಟಿಸಿ ಪರವಾನಗಿ ಕೇಳಿತ್ತು. ಜಿಲ್ಲಾಡಳಿತ 24 ಟ್ರಿಪ್‌ಗಳಿಗಷ್ಟೇ ಅನುಮತಿ ನೀಡಿತ್ತು. ಈ ನಿರ್ಧಾರದ ವಿರುದ್ಧ ಕೆಎಸ್‌ಆರ್‌ಟಿಸಿ ಕೋರ್ಟ್‌ಗೆ ಮೊರೆ ಹೋಗಿತ್ತು. ಪ್ರಸ್ತುತ ನ್ಯಾಯಾಲಯವೇ ಈ ರೂಟ್‌ನಲ್ಲಿ ಸರ್ಕಾರಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಆದೇಶ ನೀಡಿದೆ.
-ರಾಜೇಶ್ ಶೆಟ್ಟಿ, ಮಂಗಳೂರು
ಕೆಎಸ್‌ಆರ್‌ಟಿಸಿ ವಿಭಾಗಿಯ ನಿಯಂತ್ರಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net