ವೀರಶೈವ-ಲಿಂಗಾಯತ ಮಹಾಸಭಾ ಆಡಳಿತ ಮಂಡಳಿ

Governing Body of Veerashaiva-Lingayat Mahasabha
Published on

ಕುಶಾಲನಗರ:

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದ 2024-29ನೇ ಸಾಲಿನ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಭಾನುವಾರ ನಡೆಯಿತು. ಜಿಲ್ಲಾ ಘಟಕದ ಗೌರವಾಧ್ಯಕ್ಷ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ಕುಶಾಲನಗರದ ಮಹಾಲಕ್ಷಿö್ಮÃ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೊಸ ಆಡಳಿತ ಮಂಡಳಿಗೆ 31 ಜನರ ಆಯ್ಕೆ ಪ್ರಕ್ರಿಯೆ ನಡೆಯಿತು. ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಹೆಚ್.ವಿ. ಶಿವಪ್ಪ, ಉಪಾಧ್ಯಕ್ಷರುಗಳಾಗಿ ಎಸ್.ಎಸ್.ಸುರೇಶ್ ವಿರಾಜಪೇಟೆ, ಪ್ರವೀಣ್ ಹೆಚ್.ಜೆ. ಕೊಡ್ಲಿಪೇಟೆ, ನವೀನ್ ಬಸಪ್ಪ, ರಶ್ಮಿ ಡಿ.ಜೆ, ಪ್ರಧಾನ ಕಾರ್ಯದರ್ಶಿಯಾಗಿ ಶಾಂಭಶಿವಮೂರ್ತಿ, ಖಜಾಂಚಿಯಾಗಿ ಹೆಚ್.ಪಿ.ಉದಯಕುಮಾರ್, ಕಾರ್ಯದರ್ಶಿಗಳಾಗಿ ಯತೀಶ್ ಕುಮಾರ್ ಹೆಚ್.ಸಿ, ಗಣೇಶ್, ಮಮತಾ ಸತೀಶ್ ಕೊಡ್ಲಿಪೇಟೆ ಅವರನ್ನು ಆಯ್ಕೆ ಮಾಡಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net