ಕುಕ್ಕೆ ದೇವಳದಲ್ಲಿ ಸಂಪ್ರದಾಯ ಪ್ರಕಾರ ಗೋಪೂಜೆ

Sub_Gopuja
Published on

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಗೋಪೂಜೆಯನ್ನು ಶನಿವಾರ ವಿಶೇಷವಾಗಿ ಆಚರಿಸಲಾಯಿತು. ದೇವಳದ ಮುಂಭಾಗ ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯರು ಗೋಮಾತೆಗೆ ಅಕ್ಕಿ,ಬೆಲ್ಲ, ಬಾಳೆಹಣ್ಣು, ಸಿಹಿತಿನಿಸು, ಗೋಗ್ರಾಸ ನೀಡಿ, ವಿವಿಧ ವೈದಿಕ ವಿಧಿವಿಧಾನ ನೆರವೇರಿಸಿ ಗೋಮಾತೆಗೆ ಪೂಜೆ ಮಾಡಿದರು.

ಗೋಶಾಲೆಯಲ್ಲಿ ಗೋಪೂಜೆ

ದೇವಳದ ಅವಳಿ ಗೋಶಾಲೆಗಳಲ್ಲಿ ಗೋಪೂಜೆ ನೆರವೇರಿತು. ಆರಂಭದಲ್ಲಿ ಷಣ್ಮುಖ ಪ್ರಸಾದ ಭೋಜನ ಶಾಲೆಯ ಪಕ್ಕದ ಗೋಶಾಲೆಯಲ್ಲಿ ನಂತರ ಆದಿಸುಬ್ರಹ್ಮಣ್ಯ ದೇವಳಕ್ಕೆ ತೆರಳುವ ರಸ್ತೆಯ ಪಕ್ಕದಲ್ಲಿನ ಗೋಶಾಲೆಯಲ್ಲಿ ಗೋಪೂಜೆ ನೆರವೇರಿತು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಲೋಲಾಕ್ಷ ಕೈಕಂಬ, ಶ್ರೀ ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಎಕೌಂಟೆಂಟ್ ರಾಜಲಕ್ಷ್ಮಿ ಪಿ.ಶೆಟ್ಟಿಗಾರ್, ಪಶುವೈದ್ಯಾಧಿಕಾರಿ ಡಾ.ವೆಂಕಟಾಚಲಪತಿ, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಶ್ರೀ ದೇವಳದ ಪಾಟಾಳಿ ಲೋಕೇಶ್ ಎ.ಆರ್, ದೇವಳದ ಸಿಬ್ಬಂದಿ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net