ಸಮಾಜಮುಖಿ ಸೇವೆಯೊಂದಿಗೆ ಉತ್ತಮ ಕಾರ್ಯ

samajamukhi
ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ, ಅಭಿನಂದನಾ ಕಾರ್ಯಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಮುಸ್ತಾಕ್ ಹೆನ್ನಾಬೈಲ್ ಅವರನ್ನು ಗೌರವಿಸಲಾಯಿತು.
Published on

ಕುಂದಾಪುರ: ಎನ್‌ಎನ್‌ಒ ಕಮ್ಯೂನಿಟಿ ಕೇಂದ್ರ ಸಮಾಜಮುಖಿ ಸೇವೆ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದೆ. ಇಲ್ಲದವರಿಗೆ ನೆರವು ನೀಡುವಂತಹ ಪುಣ್ಯದ ಕಾರ್ಯ ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.

ಕುಂದಾಪುರದಲ್ಲಿ ಶನಿವಾರ ಎನ್‌ಎನ್‌ಒ ಕಮ್ಯೂನಿಟಿ ಸೆಂಟರ್ ಕುಂದಾಪುರ ಆಶ್ರಯದಲ್ಲಿ ಬೈತುಲ್ ಮಾಲ್ ಹಂಗಾರಕಟ್ಟೆ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ, ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಮುಸ್ತಾಕ್ ಹೆನ್ನಾಬೈಲ್ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಎನ್‌ಎನ್‌ಒ ಕಮ್ಯೂನಿಟಿ ಸೆಂಟರ್ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳದ ಎನ್‌ಎಸ್ ಅಕಾಡೆಮಿ ನಾಲ್ವರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಒಂದು ಲಕ್ಷ ರೂ. ಸಹಾಯಧನದ ಚೆಕ್ ಹಸ್ತಾಂತರಿಸಲಾಯಿತು. ಕುಂದಾಪುರ ನಗರ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ತಾ, ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಶಸ್ತಿ ಪಡೆದ ಎನ್‌ಎನ್‌ಒ ಕಮ್ಯೂನಿಟಿ ಸೆಂಟರ್‌ನ ಕ್ರಿಕೆಟ್ ಆಟಗಾರರಿಗೆ ಅಭಿನಂದನೆ ಸಲ್ಲಿಸಲಾಯಿತು.

ಪುರಸಭೆ ಸದಸ್ಯ ಅಬು ಮೊಹಮ್ಮದ್, ನಗರ ಪ್ರಾಧಿಕಾರ ಸದಸ್ಯ ಅಲ್ಫಾಜ್, ಗ್ಯಾರಂಟಿ ಸಮಿತಿ ಸದಸ್ಯ ಚಂದ್ರ ಅಮೀನ್, ಎನ್‌ಎನ್‌ಒ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಝಮೀರ್ ಅಹ್ಮದ್ ರಷಾದಿ, ಕೋಶಾಧಿಕಾರಿ ಪೀರು ಸಾಹೇಬ್, ಕುವೈತ್ ಅಧ್ಯಕ್ಷ ಮಹಮ್ಮದ್ ಅಶ್ರಫ್, ನಮ್ಮ ನಾಡ ಒಕ್ಕೂಟ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ, ಎಸ್.ಅನ್ವಯ್ ಕಂಡ್ಲೂರು, ಫಜ್ಲುಲ್ ರೆಹಮಾನ್, ಮನ್ಸೂರ್ ಇಬ್ರಾಹಿಂ, ಅಬ್ದುಲ್ ಖಾದರ್ ಮೂಡುಗೋಪಾಡಿ, ಮೊಹಮ್ಮದ್ ರಫೀಕ್ ಮತ್ತಿತರರು ಉಪಸ್ಥಿತರಿದ್ದರು. ಎನ್‌ಎನ್‌ಒ ಕಮ್ಯೂನಿಟಿ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಹುಸೇನ್ ಹೈಕಾಡಿ ಸ್ವಾಗತಿಸಿದರು. ಉಡುಪಿ ಘಟಕ ಅಧ್ಯಕ್ಷ ನಜೀರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net