More

    ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್‌ಗೆ ಉತ್ತಮ ಸ್ಪಂದನೆ; ನಾಳೆ ಕಡೇ ದಿನ..

    ಬೆಂಗಳೂರು: ವಿಜಯಾನಂದ ಟ್ರಾವೆಲ್ಸ್ ಪ್ರೈ. ಲಿ. ಪ್ರಧಾನ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ಆಯೋಜಿಸಲಾಗಿರುವ ‘ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್’ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.

    ಎರಡನೇ ದಿನದ ಕಾನ್‌ಕ್ಲೇವ್‌ನಲ್ಲಿ ಶನಿವಾರ ಖರೀದಿದಾರರ ಮತ್ತು ಮಾರಾಟಗಾರರ ದೊಡ್ಡ ಸಮಾಗಮವಾಯಿತು. 250ಕ್ಕೂ ಹೆಚ್ಚು ಮಳಿಗೆಗಳಲ್ಲಿ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲಾಯಿತು. ನಗರದ ಮೂಲೆಮೂಲೆಯಿಂದ ಸಾವಿರಾರು ಜನರು ಭೇಟಿ ನೀಡಿ ಮಳಿಗೆಗಳ ಸಿಬ್ಬಂದಿಯಿಂದ ಅಗತ್ಯ ಮಾಹಿತಿ ಪಡೆಯುತ್ತಿರುವುದು ಕಂಡುಬಂತು. ಹೊಸ ಉದ್ಯಮ ಆರಂಭಿಸುವುದು, ಉತ್ಪನ್ನಗಳಿಗೆ ಹೇಗೆ ಮಾರುಕಟ್ಟೆ ಒದಗಿಸುವುದು ಮತ್ತು ಸಾಲ ಸೌಲಭ್ಯ, ನವೋದ್ಯಮ ಪ್ರಾರಂಭ ಕೋಶ ಮಳಿಗೆಗಳಿಗೆ ಭೇಟಿ ಮಾಹಿತಿ ಪಡೆದರು. ಬಿಟುಬಿ, ಬಿಟುಸಿ, ಸಿಟುಸಿ ವಿಚಾರಸಂಕಿರಣದಲ್ಲಿ ಹೊಸ ಕೈಗಾರಿಕೆ ಕ್ಷೇತ್ರದ ತಜ್ಞರು, ಮಾಲೀಕರು ಉದ್ದಿಮೆಗಳ ಬಗ್ಗೆ ಬೆಳಕು ಚೆಲ್ಲಿದರು. ಉದ್ಯೋಗ ಮೇಳಕ್ಕೆ ಸಾವಿರಾರು ಆಕಾಂಕ್ಷಿಗಳು ಭೇಟಿ ನೀಡಿದರು.

    ಕಾನ್‌ಕ್ಲೇವ್‌ನಲ್ಲಿ ಮಾರುಕಟ್ಟೆಯಲ್ಲಿ ಬಲವಾಗಿ ಬೇರೂರಲು ನಮ್ಮಂತಹ ಹೊಸ ನವೋದ್ಯಮಗಳಿಗೆ ಸೂಕ್ತ ವೇದಿಕೆ ಸಿಕ್ಕಿದಂತಾಗಿದೆ. ಪ್ರತಿಷ್ಠಿತ ಕಂಪನಿಗಳ ಸಹಯೋಗದಲ್ಲಿ ಫೈನ್ ಟೂಲ್ಸ್ ಕಂಪನಿಯಿಂದ ಕಾರಿನ ಬಿಡಿಭಾಗಗಳನ್ನು ಕಾರು ತಯಾರಿಸುವ ಕಂಪನಿಗಳಿಗೆ ಸರಬರಾಜು ಮಾಡಲಾಗುತ್ತಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಕೆಲವರು ಮಳಿಗೆಗೆ ಭೇಟಿ ನೀಡುತ್ತಿದ್ದಾರೆ. ವ್ಯಾಪಾರ ಸಹ ಚೆನ್ನಾಗಿ ಆಗುತ್ತಿದೆ ಎಂದು ಫೈನ್ ಟೂಲ್ಸ್ ಸಂಸ್ಥೆ ಉಪಾಧ್ಯಕ್ಷ ಕುಶ ಸಂತಸ ವ್ಯಕ್ತಪಡಿಸಿದರು.

    ಇಂಥ ಕಾರ್ಯಕ್ರಮಗಳಿಂದ ಮಾರುಕಟ್ಟೆ ವೃದ್ಧಿಸಲು ನಮಗೆ ಸಹಕಾರಿಯಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ವಿವ ಪ್ರೀಮಿಯಂ ಟೀ ಸಂಸ್ಥೆ ತಯಾರಿಸುವ ಟೀ ಉತ್ಪನ್ನಗಳು ಪ್ರಸಿದ್ಧವಾಗಿದೆ. ರಾಜ್ಯಾದ್ಯಂತ ನಮ್ಮ ಉತ್ಪನ್ನಗಳನ್ನು ವಿಸ್ತರಿಸಲು ಕಾನ್‌ಕ್ಲೇವ್‌ನಲ್ಲಿ ಸಹಾಯವಾಗಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲ ಪಡೆದು ಹೊಸ ಉದ್ಯಮ ಆರಂಭಿಸಲಾಗಿದ್ದು, ಕಾನ್‌ಕ್ಲೇವ್‌ನಲ್ಲಿ ಉತ್ಪನ್ನವನ್ನು ಪರಿಚಯಿಸಲು ಅವಕಾಶ ಸಿಕ್ಕಿದೆ. ಬೇರೆ ಎಲ್ಲ ವರ್ಗದವರು ಇಂಥ ಕಾರ್ಯಕ್ರಮ ಆಯೋಜಿಸಿ ನಮ್ಮಂತಹ ನವೋದ್ಯಮಗಳಿಗೆ ಅವಕಾಶ ನೀಡಬೇಕು ಎನ್ನುತ್ತಾರೆ ಎಚ್.ಎಸ್.ಸಿದ್ದೇಶ್.

    ‘ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್’ನಲ್ಲಿ ಒಂದೇ ಸೂರಿನಡಿ 250ಕ್ಕೂ ಹೆಚ್ಚು ಕಂಪನಿಗಳಿಂದ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತದೆ. ಒಂದೇ ಸೂರಿನಡಿ ವಿದ್ಯಾರ್ಥಿಗಳಿಗೆ ಸಲಹೆ ಹಿಡಿದು ಹೊಸ ಉದ್ಯಮ ಆರಂಭಿಸುವ ಬಗ್ಗೆ ಪ್ರಮುಖ ಮಾಹಿತಿ ದೊರೆಯುತ್ತಿದೆ. ವೃತ್ತಿಪರ ಸಲಹೆ ನಡೆಸಲು ಶೈಕ್ಷಣಿಕ ಸಂಸ್ಥೆಗಳಿಂದ ಪ್ರತ್ಯೇಕ ಮಳಿಗೆ ಸ್ಥಾಪಿಸಲಾಗಿದೆ. ಹೊಸ ಸ್ವ-ಉದ್ಯೋಗಿಗಳ ಮತ್ತು ನವೋದ್ಯಮಿಗಳಿಗೆ ಅಮೂಲ್ಯ ಮಾರ್ಗದರ್ಶನ ದೊರೆಯುತ್ತಿದೆ. ಸಾವಿರಾರು ಸಾರ್ವಜನಿಕರು ಕಾನ್‌ಕ್ಲೇವ್’ಗೆ ಭೇಟಿ ನೀಡುತ್ತಿದ್ದು, ಉತ್ಪಮ ಸ್ಪಂದನೆ ವ್ಯಕ್ತವಾಗಿದೆ.
    | ಸಂತೋಷ್ ಕೆಂಚಾಂಬ. ಮುಖ್ಯ ಸಂಯೋಜಕರು, ‘ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್’

    ಸಾವಿರಾರು ವಿದ್ಯಾರ್ಥಿಗಳು ಮಳಿಗೆ ಭೇಟಿ ನೀಡಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಬಗ್ಗೆ ಮಾಹಿತಿ ಪಡೆದುಕೊಂಡರು. ಲಕ್ಷಾಂತರ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯಿಂದ ಅಣುಕು ಪರೀಕ್ಷೆ ತೆಗೆದುಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ತರಬೇತಿ ಕೋರ್ಸ್ ನಡೆಸಲಾಗುತ್ತಿದೆ. ಪರೀಕ್ಷೆ ತಯಾರಿ ಹೇಗೆ, ಯಾವ ವಿಷಯ ಬಗ್ಗೆ ಹೆಚ್ಚು ಓದಬೇಕು ಸೇರಿ ಅಗತ್ಯ ಕೌಶಲ ವಿಷಯಗಳ ಮಾಹಿತಿ ನೀಡಲಾಗಿದೆ ಎಂದು ಅವೀಲ್ ಬೋರ್ಡ್ ಸಂಸ್ಥೆಯ ಉದ್ಯೋಗಿ ಸೌಮ್ಯ ಹೇಳುತ್ತಾರೆ.

    ನಮ್ಮ ಕಂಪನಿ ವತಿಯಿಂದ ಹೊಸ ಉದ್ದಿಮೆ ಆರಂಭಿಸುವವರಿಗೆ ಆಕರ್ಷಕ ಬಡ್ಡಿ ದರದಲ್ಲಿ ಸಾಲ ದೊರೆಯಲಿದೆ. ಗ್ರಾಹಕರ ಅಗತ್ಯ ತಕ್ಕಂತೆ ವೈಯಕ್ತಿಕ ಸಾಲ ಸೇರಿ ಎಲ್ಲ ಬಗೆಯ ಸಾಲವೂ ಸಿಗಲಿದೆ. ನಮ್ಮ ಮಳಿಗೆಗೆ ಭೇಟಿ ನೀಡುತ್ತಿರುವ ಗ್ರಾಹಕರು ಸಾಲ ಸೌಲಭ್ಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಕಾನ್‌ಕ್ಲೇವ್‌ನಲ್ಲಿ ನಮಗೆ ಒಳ್ಳೆಯ ವೇದಿಕೆ ಸಿಕ್ಕಿದಂತಾಗಿದೆ ಎಂದು ಮನಿ ಮಿತ್ರಾ ಕಂಪನಿ ಉದ್ಯೋಗಿ ರಾಜ್‌ಕುಮಾರ್ ಹೇಳಿದರು.

    ಭಾನುವಾರ ತೆರೆ: ಮೂರು ದಿನಗಳ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್’ಗೆ ಭಾನುವಾರ (ಜ.22) ತೆರೆ ಬೀಳಲಿದೆ. ಬೆಳಗ್ಗೆ 11ಕ್ಕೆ ತಜ್ಞರ ಸಮಿತಿ ಚರ್ಚೆ ಮತ್ತು ಜೀವಶಾಸಗಳ ತಂತ್ರಜ್ಞಾನ ಗೋಷ್ಠಿ, ಮಧ್ಯಾಹ್ನ 12ಕ್ಕೆ ಸಂಪರ್ಕ ಜಾಲ ವಿಸ್ತರಣೆ (ನೆಟ್‌ವರ್ಕಿಂಗ್), ಸಂಜೆ 4.30ಕ್ಕೆ ‘ನನ್ನ ನವೋದ್ಯಮ ಕಥೆ’ ಕುರಿತು ಚರ್ಚೆ ಹಾಗೂ 6ಕ್ಕೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ. ವಾರಾಂತ್ಯ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆ ಇದೆ.

    ಮಕ್ಕಳಾಗಲಿ ಎಂದು ಮಹಿಳೆಗೆ ಮನೆಯವರೇ ಮನುಷ್ಯರ ಎಲುಬಿನ ಪುಡಿ ತಿನ್ನಿಸಿದ್ರು!

    ಮೇಲಿನ ಮನೆಯ ಶೋಯಬ್, ಕೆಳಗಿನ ಮನೆಯ ಶಾಜಿಯಾ ಒಂದೇ ದಿನ ಗಾಯಬ್!

    ಮಾಂಗಲ್ಯ ಕದ್ದ ಕಳ್ಳ ಪೊಲೀಸ್ ಠಾಣೆ ಹಿಂದಿನ ಮನೆಯಲ್ಲೇ ನೆಲೆಸಿದ್ದ; ಮೊದಲ ಕಳ್ಳತನದ ಟೆನ್ಷನ್​ಗೇ 20 ಕೆ.ಜಿ. ದೇಹತೂಕ ಕಳ್ಕೊಂಡಿದ್ದ!

    ಶಾಲೆಯಲ್ಲಿ ಹೃದಯಾಘಾತಕ್ಕೊಳಗಾಗಿ ಸಾವಿಗೀಡಾದ್ಲು 8ನೇ ತರಗತಿ ವಿದ್ಯಾರ್ಥಿನಿ

    ಸಂಬಂಧಿಕರ ಅಂತ್ಯಕ್ರಿಯೆಗೆ ತೆರಳುತ್ತಿದ್ದವರಲ್ಲಿ ಮೂವರು ಮಾರ್ಗಮಧ್ಯೆಯೇ ಸಾವು, ಇನ್ನೊಬ್ಬರ ಪರಿಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts